ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ಮಧುಗಿರಿ ಮೋದಿಯ ವಿರುದ್ಧ ಕೇಸ್ ದಾಖಲಾಗಿದೆ. ಜಿಲ್ಲೆಯ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸದ್ಯ ಹಿಂದೂ ಕಾರ್ಯಕರ್ತ ಮಧುಗಿರಿ ಮೋದಿ ವಿರುದ್ಧ ಗಂಗಾವತಿ ತಹಶೀಲ್ದಾರ್ ಎಫ್ ಐಆರ್ ದಾಖಲಿಸಿದ್ದಾರೆ. ಆಂಜನೇಯ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಹಿಂದೂಗಳು ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅರ್ಹರಾಗಿದ್ದಾರೆ. ದೇವಸ್ಥಾನದ ಎದುರಿಗೆ ಅಂಗಡಿ ಇಟ್ಟವರು ತಾಕತ್ತಿದ್ದರೆ ಜೈ ಶ್ರೀರಾಮ್ ಎಂದು ಹೇಳಿ ಅಂಗಡಿ ಇಟ್ಟುಕೊಟ್ಟಿ. ಆಂಜನೇಯನ ಫೋಟೋ ಹಾಕಿಕೊಂಡು ಅಂಗಡಿ ಇಟ್ಟುಕೊಳ್ಳಿ, ಅನ್ಯ ಧರ್ಮಿಯರು ದುಖಾನ್ ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿತ್ತು.
ಇದರಿಂದ ಕೋಮು ಗಲಭೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು 153 (A), 505(2), 506 ಅಡಿ ತಹಶೀಲ್ದಾರ್ ಪ್ರಕರಣ ದಾಖಲಿಸಿದ್ದಾರೆ.
PublicNext
02/10/2021 12:15 pm