ಮೈಸೂರು: ಟಿ.ನರಸೀಪುರ ಪಟ್ಟಣದ ವಾಟರ್ ಪಿಲ್ಟರ್ ಹೌಸ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಫಿಲ್ಟರ್ ಹೌಸ್ ಮುಂದಿನ ರಸ್ತೆಯನ್ನು ಬಂದ್ ಮಾಡಿದ್ದು, ಅನಿಲ ಸೋರಿಕೆ ನಿಲ್ಲಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ವಿಷ ಅನಿಲ ಸೇವಿಸಿ ಅಗ್ನಿಶಾಮಕ ದಳದ ಮೂವರು ಸಿಬ್ಬಂದಿ ಪ್ರಜ್ಞೆ ತಪ್ಪಿ ಬಿದ್ದ ಘಟನೆ ಕೂಡ ನಡೆದಿದೆ. ಒಟ್ಟಿನಲ್ಲಿ ಶತಾಯಗತಾಯ ಸೋರಿಕೆ ತಡೆಗಟ್ಟಲು ಅಗ್ನಿಶಾಮಕ ದಳ ಕಾರ್ಯೋನ್ಮುಖವಾಗಿದೆ.
PublicNext
09/11/2021 09:33 pm