ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಹಾಡುಹಗಲೇ ಮನೆಗೆ ಕನ್ನ-ಚಿನ್ನಾಭರಣ ಕದ್ದ ಕಳ್ಳರು ಪರಾರಿ!

ಹಾಡುಹಗಲೇ ಮನೆಯ ಬೀಗ ಮೀಟಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾದ ಘಟನೆ

ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ನಡೆದಿದೆ.

ಪಾವಗಡ ಮೂಲದ ಭೀಮಸೇನ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕೆಲಸಕ್ಕೆ ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ ಸುಮಾರು 15-20 ಗ್ರಾಂನಷ್ಟು ಚಿನ್ನಾಭರಣ, 15 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ಮಧ್ಯಾಹ್ನದ ಊಟಕ್ಕೆ ಮನೆ ಮಾಲೀಕರು ಮನೆಗೆ ಬಂದ ವೇಳೆ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

09/06/2022 08:32 pm

Cinque Terre

57.97 K

Cinque Terre

0

ಸಂಬಂಧಿತ ಸುದ್ದಿ