ಲಂಡನ್: ಯುವತಿಯೊಬ್ಬಳು ಸೆಕ್ಸ್ ಟಾಯ್ ಆರ್ಡರ್ ಮಾಡಿ ತಾಯಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಚಿತ್ರ ಪ್ರಸಂಗವೊಂದು ಲಂಡನ್‌ನಲ್ಲಿ ನಡೆದಿದೆ.
21 ವರ್ಷದ ಜೆಸ್ಸಿಕಾ ಸ್ಮಿತ್ ತಾಯಿಯ ಕೈಗೆ ಸಿಕ್ಕಿಬಿದ್ದ ಮಗಳು. ಲಾಕ್‌ಡೌನ್ ಸಮಯದಲ್ಲಿ ಏಕಾಂಗಿಯಾಗಿದ್ದ ಜೆಸ್ಸಿಕಾಗೆ ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚಾಗಿತ್ತು. ಈ ವಿಚಾರವಾಗಿ ಆಪ್ತ ಗೆಳತಿಯೊಂದಿಗೆ ತನ್ನ ತಳಮಳದ ಕುರಿತು ಹೇಳಿಕೊಂಡಿದ್ದಳು. ಬಳಿಕ ಆಕೆಯು ಆನ್‌ಲೈನ್ ನಲ್ಲಿ ಸೆಕ್ಸ್ ಟಾಯ್ ಸಿಗುವ ಬಗ್ಗೆ ಮಾಹಿತಿ ನೀಡಿದ್ದಳು. ಅಷ್ಟೇ ಅಲ್ಲದೆ ಆನ್ಲೈನ್ನಲ್ಲಿ ಖರೀದಿಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಹೇಳಿದ್ದಳು.
ಗೆಳತಿಯ ಮಾತನ್ನು ಕೇಳಿದ ತಕ್ಷಣವೇ ಜೆಸ್ಸಿಕಾ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ ಅವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದಳು.
ತಾಯಿ ಮಾಡಿದ ಮೆಸೇಜ್ ನೋಡಿ ಜೆಸ್ಸಿಕಾ ಕಂಗಾಲಾಗಿದ್ದಳು. ಏಕೆಂದರೆ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದು ಅಮ್ಮನ ಖಾತೆಯಿಂದ ಎನ್ನುವುದು ಮೆಸೇಜ್ ನೋಡಿದಾಗ ಗೊತ್ತಾಗಿತ್ತು. 'ಏನಿದು ಎಂದು ಪ್ರಶ್ನಿಸಿದ್ದ ಜೆಸ್ಸಿಕಾ ತಾಯಿ ನಂತರ ಮಗಳಿಗೆ, ನಿನಗೆ ಏಕಾಂಗಿ ಎಂದನಿಸುತ್ತಿದೆಯೇ? ಹಾಗಿದ್ದರೆ ನಿನ್ನದೇ ಇ-ಬೇ ಖಾತೆ ತೆರೆ. ನನ್ನ ಖಾತೆಯಿಂದ ಏನನ್ನು ಆರ್ಡರ್ ಮಾಡಬೇಡ ಎಂದು ಕಿವಿಮಾತು ಹೇಳಿದ್ದಾಳೆ.
ಈ ವಿಚಾರವನ್ನು ಜೆಸ್ಸಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾಯಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.
PublicNext
06/10/2020 08:41 pm