ಲಿಖಿಂಪುರ: ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಹಾಗೂ ಆರೀಫ್ ಎಂಬಾತರು ಬಂಧಿತ ಆರೋಪಿಗಳು. ಇದರಲ್ಲಿ ಜುನೈದ್ ತಪ್ಪಿಸಿಕೊಳ್ಳಲು ಹೋದಾಗ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಇತ್ತೀಚೆಗೆ ಅಪ್ರಾಪ್ತ ದಲಿತ ಸಹೋದರಿಯರ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಇಬ್ಬರ ಶವಗಳನ್ನು ನೇಣಿಗೇರಿಸಲಾಗಿತ್ತು. ಲಿಖಂಪುರದ ಕಬ್ಬಿನ ಗದ್ದೆಯ ಸಮೀಪ ಈ ಘಟನೆ ನಡೆದಿತ್ತು. ತನಿಖೆ ವೇಳೆ ಇದು ಸಾಬೀತಾಗಿತ್ತು. ಈ ಎಲ್ಲ ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ ಎಂದು ಎಸ್‌ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ.
PublicNext
15/09/2022 05:15 pm