ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕಮರಡಿ ಗ್ರಾಮದಲ್ಲಿ ನಾಡ ಪಿಸ್ತೂಲಿನಿಂದ ಶಾಸಕ ಸತೀಶ್ ಜಾರಕಿಹೊಳಿ ಆಪ್ತನ ಮೇಲೆ ಈ ಹಿಂದೆ ಫೈರಿಂಗ್ ಮಾಡಿದ್ದ ವ್ಯಕ್ತಿಯನ್ನು ಭಾನುವಾರ ರಾತ್ರಿ ಹತ್ತರಗಿ ಕ್ರಾಸ್ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಯಮಕನಮರಡಿ ನಿವಾಸಿಯಾದ ವಿನಾಯಕ ಹೊರಕೇರಿ(28) ಕೊಲೆಗೀಡಾದ ಯುವಕ. ಇತ್ತೀಚೆಗಷ್ಟೇ ಜಾಮೀನ ಮೇಲೆ ಹೊರಗಡೆ ಬಂದಿದ್ದ, ನಿನ್ನೆ ರಾತ್ರಿ ಡಾಬಾ ಒಂದರಲ್ಲಿ ಊಟ ಮುಗಿಸಿ ಮನೆಗೆ ಬೈಕ್ ಮೇಲೆ ತೆರುಳುವಾಗ, ದುಷ್ಕರ್ಮಿಗಳು ಹಿಂಬಾಲಿಸಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರವಾದ ರಕ್ತಸ್ರಾವದಿಂದಾಗಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ವಿಪರ್ಯಾಸವೆಂದರೆ ಈತ ಶನಿವಾರವಷ್ಟೇ ಭರ್ಜರಿಯಾಗಿ ತನ್ನ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ, ಈಗ ಕೊಲೆಯಾಗಿ ಹೋಗಿದ್ದಾನೆ. ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
05/09/2022 08:16 am