ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಮೌನ ಮುರಿದ ಮುರುಘಾ ಶರಣರು; ಸಭೆಯ ಆಡಿಯೋ ವೈರಲ್

ಚಿತ್ರದುರ್ಗ: ನಗರದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಆರೋಪದಡಿ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಭಕ್ತರೊಂದಿಗಿನ ಸಭೆಯಲ್ಲಿ ಮಾತನಾಡಿದ್ದಾರೆ. ಈ ಸಭೆಯಲ್ಲಿ ಮುರುಘಾ ಶರಣರು ಭಾಷಣ ಮಾಡಿದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಶರಣರು ಮಾತಾಡಿದ್ದು ಏನು? ಇಲ್ಲಿದೆ.

'ಇದು ದೊಡ್ಡ ಮಟ್ಟದ ಕಿರುಕುಳ ಮತ್ತು ಪಿತೂರಿಯಾಗಿದೆ. ಗಾಳಿ ಪಟ ಕೆಳಗೆ ಇದ್ದಾಗ ಗಾಳಿಯ ಹೊಡೆತ ಗೊತ್ತಾಗಲಿಲ್ಲ. ಸಣ್ಣವರಿಗೆ ಸಣ್ಣ ಕುತ್ತು, ದೊಡ್ಡವರಿಗೆ ದೊಡ್ಡ ಕುತ್ತು ಬಂದಿದೆ. ನಮ್ಮ ವಿರುದ್ಧ ಪಿತೂರಿ, ಒಳಸಂಚು ಮಾಡಿದ್ದಾರೆ. ಇದರ ಬಗ್ಗೆ ಸಮರಕ್ಕೂ ಸಿದ್ಧ. ಯಾವ ಸಮಸ್ಯೆ ಶಾಶ್ವತ ಅಲ್ಲ, ಯಾವ ಸುಖವೂ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಎಲ್ಲವನ್ನೂ ಕಾಲವೇ ನಿರ್ಣಯಮಾಡುತ್ತದೆ. ಸಾಧ್ಯವಾದರೆ ಸಮಸ್ಯೆ ಪರಿಹರಿಸೋಣ, ಇಲ್ಲವೇ ಹೋರಾಟ ನಡೆಸೋಣ. ಯಾರೂ ಕೂಡ ದುಃಖ ಮಾಡಿಕೊಳ್ಳಬೇಡಿ ಎಂದು ಮುರುಘಾ ಶರಣರು ಹೇಳಿದ್ದಾರೆ.

ಯೇಸು ಕ್ರಿಸ್ತನಿಗೆ, ಪೈಗಂಬರ್‌ಗೆ ಟಾರ್ಚರ್ ಮಾಡಿದವರು ಅದೇ ಧರ್ಮದವರು. ಗೌತಮ ಬುದ್ಧನಿಗೆ ಕೊನೆಗಳಿಗೆಯಲ್ಲಿ ಮಾಂಸದ ರಸವನ್ನು ಕುಡಿಸಿದವರು ಬೇರೆಯವರಲ್ಲ. ಎಲ್ಲಾ ಸಮಾಜ ಸುಧಾರಕರು ಇಂತಹ ಸಂಕಷ್ಟ ಎದುರಿಸಿದ್ದಾರೆ. ಈ ರೀತಿ ಬೆಳವಣಿಗೆಯಿಂದ ತುಂಬಾ ನೋವಾಗಿದೆ. ಭಕ್ತರಿಗೂ ನೋವಾಗಿದೆ. ಮುರುಘಾ ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಆದರ್ಶಕ್ಕಾಗಿ ಸಂಘರ್ಷ ನಡೆಯುತ್ತಿಲ್ಲ. ಮುರುಘಾ ಮಠವನ್ನು ಭಕ್ತರು ಬಂದು ನೋಡುವಂತೆ ಮಾಡಿದ್ದೇವೆ. ಇಂತಹ ಅನಾರೋಗ್ಯಕರ ಬ್ಲಾಕ್ ಮೇಲ್, ಅಧಿಕಾರ ಹಿಡಿಯಲು ಕುತಂತ್ರ ಸಹಿಸಲ್ಲ. ನಾವು ಸಂಧಾನಕ್ಕೂ ಸಿದ್ಧ, ಸಂಧಾನ ಫೇಲಾದರೆ ಸಮರಕ್ಕೂ ಸಿದ್ಧವಾಗಿದ್ದೇವೆ. ಮಠದಲ್ಲಿ ಇದ್ದವರೇ ಮಾಡಿದ ಪಿತೂರಿ, ಸಂಚು ಇದಾಗಿದೆ ಎಂದು ಆರೋಪ ಮಾಡಿದ್ದಾರೆ.

ಮುರಘಾ ಮಠದ ಮೇಲಿನ ಅಭಿಮಾನ ಬಡಿದೆಬ್ಬಿಸಲು ಮಾಡಿದ ಕೆಲಸ ಇದು, ಅಭಿಮಾನ ಜಾಗೃತ ಆಗುತ್ತಿದೆ. ಇಂತಹ ಎರಡು ಮೂರು ಸನ್ನಿವೇಶಗಳನ್ನು ಕಾನೂನು ಮೂಲಕ ಎದುರಿಸಿದ್ದೇವೆ. ಎಲ್ಲದಕ್ಕೂ ಪರಿಹಾರ ಇದೆ. ನೋವು ಮಾಡಿಕೊಳ್ಳಬೇಡಿ. ನನ್ನ ನೋವಿನ ಜೊತೆ ನೀವಿರುವುದೇ ದೊಡ್ಡ ಧೈರ್ಯ. ಕೆಟ್ಟವರಿಗೆ ನೋವಾದಾಗ ಜನ ಸೇರಲ್ಲ. ಒಳ್ಳೆಯವರಿಗೆ ನೋವಾದಾಗ ಜನ ಈ ರೀತಿ ಸೇರುತ್ತಾರೆ ಎಂಬುದಕ್ಕೆ ನೀವೇ ಸಾಕ್ಷಿ. ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವಿದ್ದೇವೆ. ಈ ಮಠವನ್ನು ಸರ್ವ ಜನಾಂಗದ ಮಠವಾಗಿ ಮುನ್ನಡೆಸಿಕೊಂಡು ಹೋಗೋಣ ಎಂದು ಹೇಳಿದರು.

Edited By : Vijay Kumar
PublicNext

PublicNext

27/08/2022 11:15 pm

Cinque Terre

66.59 K

Cinque Terre

3

ಸಂಬಂಧಿತ ಸುದ್ದಿ