ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳದಲ್ಲಿ 2 ಗುಂಪುಗಳ ನಡುವೆ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಕೊಪ್ಪಳ: ಕೋಮು ಘರ್ಷಣೆಯಿಂದ ಕರ್ನಾಟಕ ಬೆಂದು ಹೋಗಿದೆ. ಹೊತ್ತಿ ಉರಿದಿದ್ದ ಕರಾವಳಿ ಈಗ ಶಾಂತವಾಗಿದೆ. ಆದರೆ ಈಗ ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ.

ಕೊಪ್ಪಳ‌ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಮಾರಾಮಾರಿ ನಡೆದಿದೆ. ಮಾರಾಮಾರಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ನಂತರದ ಬೆಳವಣಿಗೆಯಲ್ಲಿ ಕಲ್ಲುತೂರಾಟ ನಡೆದಿದ್ದು, ಬೈಕ್​ಗಳು ಜಖಂ ಆಗಿದೆ. ಸದ್ಯ ಕೊಪ್ಪಳದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಶಾಂತವಾಗಿದ್ದ ಕೊಪ್ಪಳದಲ್ಲಿ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಯಂಕಪ್ಪ (60) ಮತ್ತು ಪಾಷಾವಲಿ (22) ಸಾವನ್ನಪ್ಪಿದ್ದಾರೆ. 2 ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂದಿನಿಂದ ಆಗಸ್ಟ್​​ 20ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗ್ರಾಮದಿಂದ 2 ಕಿಮೀ ವ್ಯಾಪ್ತಿಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Edited By : Manjunath H D
PublicNext

PublicNext

11/08/2022 06:45 pm

Cinque Terre

71.67 K

Cinque Terre

17

ಸಂಬಂಧಿತ ಸುದ್ದಿ