ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೈಲು ನಿಲ್ದಾಣದಲ್ಲಿ ರಾಕ್ಷಸೀ ಕೃತ್ಯ ನಡೆದಿದೆ. ಪ್ಲಾಟ್‌ಫಾರ್ಮ್‌ನಲ್ಲೇ 30 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ನಾಲ್ವರು ರೈಲ್ವೇ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸತೀಶ್‌ಕುಮಾರ್ (35) ವಿನೋದ್‌ಕುಮಾರ್ (38) ಮಂಗಲ್ ಚಾಂದ್ (33) ಜಗದೀಶ್ ಚಾಂದ್ (37) ಎಂದು ಗುರುತಿಸಲಾಗಿದೆ. ಬಂಧಿತರಾದ ಇವರೆಲ್ಲ ರೈಲ್ವೇ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳು. ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನ ರೈಲು ಲೈಟ್ ಗುಡಿಸಲಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳು ಆತ್ಯಾಚಾರ ಎಸಗಿದರೆ ಇನ್ನಿಬ್ಬರು ಹೊರಗೆ ಕಾವಲು ಕಾದಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಬೆಳಗಿನ 3.27ಕ್ಕೆ ಕರೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ನಡೆದ ಕೃತ್ಯ ಗೊತ್ತಾಗಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
23/07/2022 04:50 pm