ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಆಟೋದಲ್ಲಿ 27 ಜನ ಪ್ರಯಾಣ: ಸೀಜ್ ಮಾಡಿ 11,500 ರೂ ದಂಡ ಹಾಕಿದ ಪೊಲೀಸರು

ನವದೆಹಲಿ: ಬಕ್ರೀದ್ ನಮಾಜ್‌ಗೆ ತೆರಳಿ ಬರೋಬ್ಬರಿ 27 ಜನ ಒಂದೇ ಆಟೋ ರಿಕ್ಷಾದಲ್ಲಿ ವಾಪಸ್ ಆಗುತ್ತಿದ್ದರು. ಅನುಮಾನಗೊಂಡು ಪೊಲೀಸರು ಪರಿಶೀಲಿಸಿದಾಗ ಒಳಗೆ 27 ಜನ ಇರುವುದು ಗೊತ್ತಾಗಿದೆ. ಎಲ್ಲರನ್ನೂ ಕೆಳಗಿಳಿಸಿದ ಪೊಲೀಸರು ಆಟೋ ರಿಕ್ಷಾ ಸೀಜ್ ಮಾಡಿ ಚಾಲಕನಿಗೆ 11,500 ರೂ ದಂಡ ಹಾಕಿದ್ದಾರೆ.

ಉತ್ತರ ಪ್ರದೇಶದ ಫತೇಪುರದ ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಒಂದೇ ಆಟೋ ರಿಕ್ಷಾದಲ್ಲಿ 27 ಮಂದಿಯನ್ನು ಕರೆದೊಯುತ್ತಿದ್ದ ಚಾಲಕನಿಗೆ ಪೊಲೀಸರು ದಂಡ ಹಾಕಿ ಆಟೋ ಸೀಜ್ ಮಾಡಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಇದೇ ಪ್ರದೇಶದಲ್ಲಿ ಪೊಲೀಸರು ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯದಂತೆ ಮನವಿ ಮಾಡಿದ್ದರು. ಆದರೆ ಆಟೋ ಚಾಲಕರು ತಮ್ಮ ಹಳೇ ಚಾಳಿ ಮುಂದುವರೆಸಿದ್ದರು.

Edited By : Nagaraj Tulugeri
PublicNext

PublicNext

12/07/2022 07:43 am

Cinque Terre

71.74 K

Cinque Terre

6

ಸಂಬಂಧಿತ ಸುದ್ದಿ