ಮಹಾನಗರಗಳ ಜನಜಂಗುಳಿ ನಡುವೆ ಕಿಸೆಗಳ್ಳನ, ಸರಗಳ್ಳತನ ಮಾಮೂಲಿ ಎಂಬಂತಾಗಿವೆ. ಆದ್ರೆ ಈ ಕಿಸೆಗಳ್ಳರಿಗೆ ಸೆಡ್ಡು ಹೊಡೆಯುವಂತೆ ಇಲ್ಲೊಬ್ಬ ಕಳ್ಳ ಯಾರಿಗೂ ಗೊತ್ತಾಗದಂತೆ ಎಲ್ಲರ ಮುಂದೆಯೇ ಚಿನ್ನದ ಸರ ಕದ್ದಿದ್ದಾನೆ.
ಸಾವಿರಾರು ಜನ ಸೇರಿರುವ ಜನರ ನಡುವೆಯೇ ಈ ಘಟನೆ ನಡೆದಿದೆ. ಮೆರವಣಿಗೆಯೊಂದರಲ್ಲಿ ಮಂಟಪದ ಸುತ್ತ ಸಾಮಾನ್ಯವಾಗಿ ಗೌಜು-ಗದ್ದಲ ಇದ್ದೇ ಇರುತ್ತೆ. ಅದರ ಥೇಟ್ ಭಕ್ತಮಂತೆ ಬಿಳಿ ಅಂಗಿ ಬಿಳಿ ಪ್ಯಾಂಟ್, ಹಾಗೂ ಬಿಳಿ ಟೋಪಿ ಧರಿಸಿ ಬಂದ ಕಳ್ಳ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಹಲ್ಲಿನಿಂದ ಕತ್ತರಿಸಿ ಮತ್ತದೇ ಜನಜಂಗುಳಿಯಲ್ಲಿ ಮರೆಯಾಗಿದ್ದಾನೆ.
ಈ ಸನ್ನಿವೇಶ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸರ ಕಳೆದುಕೊಂಡ ಯುವಕ ತನ್ನ ಕತ್ತು ಮುಟ್ಟಿಕೊಳ್ಳುತ್ತ ಹ್ಯಾಪು ಮೋರೆ ಹಾಕಿಕೊಂಡು ಈಚೆ ಬರುತ್ತಿರುವುದು ಕೂಡ ದೃಶ್ಯದಲ್ಲಿ ಕಾಣುತ್ತಿದೆ. ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಆದ್ರೆ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
26/06/2022 01:43 pm