ಬೀದರ್: ಇಸ್ಲಾಂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಕಿಡಿಗೇಡಿಯೊಬ್ಬ ಅವಹೇಳನಕಾರಿ ಪೋಸ್ಟ್ ಹಾಕಿದ ಪರಿಣಾಮ ಬಸವಕಲ್ಯಾಣ ಪಟ್ಟಣ ಉದ್ವಿಗ್ನಗೊಂಡಿದೆ.
ರಾಜಕುಮಾರ್ ಮಾಳಗೆ ಎಂಬ ಯುವಕ ವಾಟ್ಸ್‌ಆ್ಯಪ್ ಗ್ರುಪ್‌ನಲ್ಲಿ ಮಹಮ್ಮದ್ ಪೈಗಂಬರ್ ಅವರ ವ್ಯಂಗ್ಯ ಚಿತ್ರವನ್ನು ಶೇರ್ ಮಾಡಿದ್ದ. ಇದನ್ನು ಕಂಡ ಪಟ್ಟಣದ ಮುಸ್ಲಿಮರು ಆಕ್ರೋಶಗೊಂಡು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಹಾಗೂ ಪೋಸ್ಟ್ ಹಂಚಿಕೊಂಡಿದ್ದ ಯುವಕನನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಕೆಲಹೊತ್ತಿನಲ್ಲಿ ಆರೋಪಿ ರಾಜಕುಮಾರ ಮಾಳಗೆಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಪ್ರತಿಭಟನಾಕಾರರು ಚದುರಿದ್ದಾರೆ. ಘಟನೆ ನಂತರ ಈಗಲೂ ಬಸವಕಲ್ಯಾಣ ಪಟ್ಟಣ ಬೂದಿ ಮುಚ್ಚಿದ ಕೆಂಡದಂತೆ ಇದೆ. ಸದ್ಯ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
PublicNext
14/06/2022 02:56 pm