ಗೋಕಾಕ : ಮಳೆ, ಬೇಸಿಗೆ, ಚಳಿಯಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಹಾದಿ ಬೀದಿಗಳನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರ ಅರ್ಧ ವೇತನವನ್ನು ಹಣ ಗುತ್ತಿಗೆದಾರ ಕಬಳಿಸುತ್ತಿದ್ದು, ಅರ್ಧ ವೇತನ ನೀಡದವರನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಹೌದು ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಸ್ವಚ್ಛತೆ, ವಾಹನ ಚಾಲಕರು ಹಾಗೂ ನೀರು ಸರಬರಾಜು ಕೆಲಸವನ್ನು ಗುತ್ತಿಗೆ ನೀಡಲಾಗಿದೆ. ಇದೆ ಪುರಸಭೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕ ಶಿವಾನಂದ ಯಲ್ಲಪ್ಪ ಹಾದಿಮನಿ ಎಂಬಾಗ ಹಾಗೂ ಆತನ ತಾಯಿ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ತಾನೂ ಕೂಡ ಪೌರಕಾರ್ಮಿಕನಿದ್ದರೂ ಸಹ ಒಂದು ದಿನವೂ ಸ್ವಚ್ಛತೆ ಮಾಡದೆ ಗುತ್ತಿಗೆಯ ಹೆಸರಿನ ಮೇಲೆ ದುಡಿಯುವ ಪೌರಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಪೌರಕಾರ್ಮಿಕರು ತಮ್ಮ ವೇತನದ ದಿನದಂದು ಬ್ಯಾಂಕಿನಿಂದ ಹಣ ತೆಗೆದುಕೊಂಡು ಶಿವಾನಂದನಿಗೆ ಕೈಗೆ ನೀಡಿ ಮತ್ತೆ ಅವನ ಮನೆಗೆ ಹೋಗಿ ಅರ್ಧ ವೇತನ ಮಾತ್ರ ಪಡೆದುಕೊಳ್ಳಬೇಕಂತೆ.
ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದಾನಂತೆ. ಒಂದು ವೇಳೆ ಕೇಳಿದರೂ ಸಹ ಆತ ಅರ್ದ ಹಣವನ್ನು ನಿಮ್ಮ ESI, EPFಗೆ ತುಂಬಿದ್ದೇನೆ ಅಂತ ಹೇಳುತ್ತಾನೆ. ಅಷ್ಟೆ ಅಲ್ಲ ಅದೂ ಕೂಡ ಆರು ತಿಂಗಳಿಗೊಮ್ಮೆ, ಎಂಟು ತಿಂಗಳಿಗೊಮ್ಮೆ ವೇತನ ಕೊಡುತ್ತಿದ್ದಾನಂತೆ.
ಇವನ ವಿರುದ್ಧ ಅನೇಕ ಬಾರಿ ಮೌಖಿಕವಾಗಿ, ಲಿಖಿತವಾಗಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಮೇಲಧಿಕಾರಿಗಳಿಗೂ ಇದರಲ್ಲಿ ಪಾಲಿರಬಹುದೇ ಎಂಬ ಸಂಶಯ ಮೂಡುತ್ತಿದೆ. ಮೇಲಾಗಿ ಇವನೂ ಸಹ ಪೌರಕಾರ್ಮಿಕನಿದ್ದರೂ ಸಹ ಈತನನ್ನು ಪೌರಕಾರ್ಮಿಕರ ಮೇಲೆ ಮೇಲ್ವಿಚಾರಕನಾಗಿ ನೇಮಿಸಿದ್ದು ಯಾರು, ಯಾಕೆ ಅನ್ನೋದು ರಹಸ್ಯವಾಗಿದೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಂದರೂ ಸಹ ಗುತ್ತಿಗೆದಾರ ಹಾಗೂ ಶಿವಾನಂದ ಹಾದಿಮನಿ ಮೇಲೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಅದಲ್ಲದೆ ಈಗಾಗಲೆ ಈತನ ಮೇಲೆ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಯಾವ ಕ್ರಮ ಜರುಗಿಲ್ಲ, ಇದೆ ಒಂದು ಕಾರಣಕ್ಕೆ ದಬ್ಬಾಳಿಕೆ ಮುಂದುವರೆಸುತಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.
PublicNext
03/06/2022 06:30 pm