ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಕೊನೆಗೂ ಒಂದು ಹಂತ ತಲುಪಿದಂತೆ ಕಾಣ್ತಿದೆ. ಸಿಐಡಿಯ ತನಿಖಾಧಿಕಾರಿಗಳಿಂದ ಅಂದಿನ ನೇಮಕಾತಿ ಎಡಿಜಿಪಿ ಅಮೃತ್ ಪೌಲ್ ವಿಚಾರಣೆ ನಡೆಸ್ತಿದ್ದಾರೆ. ನೇಮಕಾತಿ ವಿಭಾಗದಲ್ಲಿ ಅಮೃತ್ ಪೌಲ್ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಹಗರಣ ನಡೆದಿತ್ತು ಈ ಸಂಬಂಧ ಅಮೃತ್ ಪೌಲ್ ಆಪ್ತ ಅಧಿಕಾರಿ ಡಿವೈಎಸ್ಪಿ ಶಾಂತರಾಜುನನ್ನ ಸಿಐಡಿ ಈಗಾಗ್ಲೆ ಬಂಧಿಸಿದೆ. ಶಾಂತಕುಮಾರ್ ಹೇಳಿಕೆ ಮೇಲೆ ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರೋ ಅಮೃತ್ ಪೌಲ್ ವಿಚಾರಣೆ ನಡೆಸಲಾಗ್ತಿದೆ.
ಸಿಐಡಿ ಎಡಿಜಿ ಉಮೇಶ್ ಕುಮಾರ್ ಸಮ್ಮುಖದಲ್ಲಿ ಡಿವೈಎಸ್ಪಿ ಶೇಖರ್ ಅಮೃತ್ ಪೌಲ್ ವಿಚಾರಣೆ ನಡೆಸ್ತಿದ್ದಾರೆ.
ನಿನ್ನೆ ಸಂಜೆ 4.30ರಿಂದ ರಾತ್ರಿ 7ಗಂಟೆವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ಇಂದು ಬೆಳಗ್ಗೆ 11 ಗಂಟೆಯಿಂದ ಮತ್ತೆ ವಿಚಾರಣೆ ನಡೆಸ್ತಿದ್ದಾರೆ.
ಕಳೆದ ವಾರ ಎಸಿಪಿ ಶಾಂತ ಕುಮಾರ್ ಬಂಧನ ಮಾಡಿದ್ದ ಸಿಐಡಿವೇಳೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ರು.ಕೆಲ ಸಾಕ್ಷ್ಯಾಧಾರಗಳು ಸಿಕ್ಕ ಕಾರಣಕ್ಕೆ ಎಡಿಜಿಪಿಯನ್ನು ವಿಚಾರಣೆಗೆ ಕರೆದು ವಿಚಾರಣೆ ನಡೆಸಲಾಗ್ತಿದೆ.
PublicNext
26/05/2022 01:32 pm