ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ನಕಲಿ ಮದ್ಯ ಸಂಗ್ರಹಿಸಿದ್ದ ತೋಟದ ಮನೆ ಮೇಲೆ ದಾಳಿ, ಅಧಿಕಾರಿಗಳ ಮೇಲೆ ಹಲ್ಲೆ!

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಕಲಿ ಮದ್ಯ ಹಾವಳಿ ಜಾಸ್ತಿಯಾಗಿದ್ದು, ಗುರುವಾರ ಸಂಜೆ ವೇಳೆ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಚಂದಾಪುರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ನಕಲಿ ಮದ್ಯ ಸಂಗ್ರಹಿಸಿರುವದನ್ನು ಪತ್ತೆ ಮಾಡಿದ ಅಧಿಕಾರಿಗಳ ತಂಡ ದಾಳಿ ನಡೆಸಿ 12 ಲಕ್ಷ ಮೌಲ್ಯದ 45 ನಕಲಿ ಮದ್ಯದ ಬಾಕ್ಸ್ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಆರೋಪಿ ಹಣಮಂತ್ರಾಯ ಸದಾಶಿವ ಸಾಹು ಅವರನ್ನು ಅಬಕಾರಿ ಅಧಿಕಾರಿಗಳ ತಂಡ ಬಂಧಿಸಿ ಕರೆದೊಯ್ಯುವಾಗ ಗ್ರಾಮಸ್ಥರು ಹಾಗೂ ಆತನ ಸಹಚರರು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಬಡಿಗೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಶಹಾಪುರ ಅಬಕಾರಿ ಉಪ ನೀರಿಕ್ಷಕ ವಿಜಯಕುಮಾರ ಹಿರೇಮಠ ಹಾಗೂ ತಂಡ ಚಂದಾಪುರ ಮಾರ್ಗದಲ್ಲಿ ತಪಾಸಣೆಗಾಗಿ ನಿಂತ ವೇಳೆ ಕೆಎ 33 ಎ 7677 ಸ್ವಿಫ್ಟ್ ಡಿಸೈರ್ ಕಾರು ಪರಿಶೀಲಿಸಲಾಗಿ ಹಿಂದಿನ ಡಿಕ್ಕಿಯಲ್ಲಿ ನಕಲಿ ಮಧ್ಯ ಪತ್ತೆಯಾಗಿದೆ. ಚಾಲಕ ಹಣಮಂತ್ರಾಯ ತಂದೆ ಸದಾಶಿವ ಸಾಹುನನ್ನ ವಿಚಾರಿಸಿದ ಅಧಿಕಾರಿಗಳು ಈ ಮದ್ಯ ಎಲ್ಲಿಗೆ ಸಾಗಿಸುತ್ತಿರುವೆ ಎಂದಾಗ ಸಮೀಪದ ತೋಟದ ಮನೆಯಲ್ಲಿ ಸಂಗ್ರಹಿಸಲು ಎಂದು ಬಾಯಿ ಬಿಟ್ಟಿದ್ದಾನೆ . ಆತನ ಜೊತೆ ತೋಟದ ಮನೆಗೆ ಹೋಗಿ ಪರಿಶೀಲಿಸಿದ್ದು, 45 ಬಾಕ್ಸ್ ನಕಲಿ ಮಧ್ಯ ಪತ್ತೆಯಾಗಿದೆ. ಇನ್ನುಳಿದ ನಾಲ್ವರನ್ನು ಬಂಧಿಸುವಷ್ಟರಲ್ಲಿ 45ಕ್ಕೂ ಹೆಚ್ಚು ಜನ ಬಂದು ಗಲಾಟೆ ಮಾಡಿದ್ದಾರೆ.

ದಾಳಿ ವೇಳೆ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಸುಮಾರು 40 ಜನರ ಮೇಲೆ ಗೋಗಿ ಠಾಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ವಿಜಯಕುಮಾರ ಹಿರೇಮಠ ಅವರು ಪ್ರಕರಣ ದಾಖಲಿಸಿದ್ದು, ಎಫ್ ಐ ಆರ್ ನಲ್ಲಿ 20 ಜನರ ಹೆಸರು ದಾಖಲಿಸಿದ್ದು, ಇನ್ನುಳಿದ 20 ಜನರ ಹೆಸರು ಪತ್ತೆ ಹಚ್ಚಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Nagesh Gaonkar
PublicNext

PublicNext

21/05/2022 03:05 pm

Cinque Terre

78.56 K

Cinque Terre

1

ಸಂಬಂಧಿತ ಸುದ್ದಿ