ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದ ನಾಗ ಪೊಲೀಸ್ರ ಮುಂದೆ ತನ್ನ ವಿಕೃತಿ ಮನಸ್ಥಿತಿಯನ್ನು ಹೊರಹಾಕಿದ್ದಾನೆ.
ಸಾರ್. ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ,ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದ್ರೆ, ನನ್ನನ್ನು ಅಣ್ಣ ಅಂದುಬಿಟ್ಲು ನನಗೆ ಮದುವೆ ಸೆಟ್ಟಾಗಿದೆ ಅಂದು ಬಿಟ್ಲು ಇದ್ರಿಂದ ನನಗೆ ಕೋಪ ಬಂದಿತ್ತು.ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ, ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ.ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆಗ ಹಾಕ್ದೆ ಎಂದು ಹೇಳಿದ್ದಾನೆ.
ಈಗ್ಲು ಅವ್ರ ಕೊಡ್ತಾರ ಕೇಳಿ ನೋಡಿ ಸರ್ ಅವಳನ್ನ ಮದುವೆಯಾಗ್ತೀನಿ ಅಂತ ಪೊಲೀಸ್ರ ಮುಂದೆ ನಾಗ ತನ್ನ ವಿಕೃತಿ ಮನಸ್ಥಿತಿ ಹೊರಹಾಕಿದ್ದಾನೆ.ಯಾಕೊ ಆ್ಯಸಿಡ್ ಹಾಕಿದೆ ಅಂತಾ ಪೊಲೀಸ್ರು ಕೇಳಿದ್ರೆ. ನಾನು ಆಸಿಡ್ ಹಾಕಬೇಕು ಅಂತಾ ಅನ್ಕೊಂಡಿರಲಿಲ್ಲ ಸಾರ್ ಅವರ ಮನೆಯವರೇ ಊರು ತುಂಬಾ ಹೇಳ್ಕೊಂಡ್ ಬಂದ್ರು. ಆ್ಯಸಿಡ್ ಹಾಕ್ತಾನಂತೆ ಆ್ಯಸಿಡ್ ಹಾಕ್ತಾನಂತೆ ಅಂತಾ ಉಯಿಲೆಬ್ಬಿಸಿದ್ರು.
ಯಾವಾಗ ಇವ್ರು ಎಲ್ಲಾ ಕಡೆ ಹೇಳ್ಕೊಂಡ್ ಬಂದ್ರೊ ಆಗ ಆ್ಯಸಿಡ್ ಹಾಕ್ದೆ ಅಂತ ಹೇಳಿಕೊಂಡಿದ್ದಾನೆ. ಇನ್ನೂ ಪೊಲೀಸ್ರ ಏನೊ ಇದು ಕೈ ಗಾಯ ಅಂದ್ರೆ, ನನ್ನ ಸುಟ್ಟ ಕೈ ನೋಡಿದಾಗಲೆಲ್ಲ ಅವಳು ಅಳೋದು ನೆನಪಾಗಬೇಕು ಸಾರ್ ಅದಕ್ಕೆ ಈ ಗಾಯ ಮಾಡಿಕೊಂಡಿದ್ದಿನಿ ಎಂದಿದ್ದಾನೆ.
ಇನ್ನೂ ಇಷ್ಟು ದಿನ ತಲೆ ಮರೆಸಿಕೊಳ್ಳಲು ಕಾರಣವೇನು ನೀವು ಹುಡುಕ್ತಿರ್ತೀರ ಅಂತಾ ಗೊತ್ತಿತ್ತು ಸರ್ ಮೂರ್ ಹೊತ್ತು ಊಟ , ಜೈಲಲ್ಲಿದ್ರೂ ಹಾಕ್ತಾರೆ. ಧ್ಯಾನ ಮಾಡ್ಕೊಂಡ್ ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದ್ದೆ.
ಹುಡುಗಿ ಅಣ್ಣ ಅಂತಾ ಕರೆದಾಗ್ಲೆ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದ್ದೆ, ಇದೇ ಕಾರಣಕ್ಕೆ ದೇವಸ್ಥಾನ ಸೇರಿ ಸೇವೆ ಮಾಡ್ತಿದ್ದೆ ಎಂದು ನಾಗ ಬಾಯಿ ಬಿಟ್ಟಿದ್ದಾನೆ
PublicNext
14/05/2022 06:39 pm