ಲಕ್ನೋ: ಯುವಕರ ಗುಂಪೊಂದು ಸಂಚಾರ ದಟ್ಟನೆಯ ರಸ್ತೆ ಬದಿಗೆ ಕಾರು ನಿಲ್ಲಿಸಿ ಕಾರಿನ ರೂಫ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ವೈರಲ್ ಆಗಿದೆ.
ಯುವಕರು ಹುಚ್ಚಾಟದ ವಿಡಿಯೋವನ್ನು ಟ್ವೀಟ್ ಮಾಡಿದ್ದ ಪ್ರಶಾಂತ್ ಕುಮಾರ್ ಎಂಬವರು, 'ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಹುಡುಗರ ಗುಂಪೊಂದು, ಮದ್ಯದ ಅಮಲಿನಲ್ಲಿ ತಮ್ಮ ಕಾರಿನ ರೂಫ್ ಮೇಲೆ ನೃತ್ಯ ಮಾಡಿದ್ದಾರೆ. ಗಾಜಿಯಾಬಾದ್ ಪೊಲೀಸರು ಈ ಪುಂಡರನ್ನು ಲಾಕಪ್‌ನಲ್ಲಿ ಹಾಕಿ ತಮ್ಮ ಟ್ಯೂನ್‌ಗಳಿಗೆ ಬೇಗ ನೃತ್ಯ ಮಾಡುವಂತೆ ಮಾಡುತ್ತಾರೆ ಎಂದು ಭಾವಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ವೀಟ್‌ನಲ್ಲಿ ಗಾಜಿಯಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ವಿಡಿಯೋ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಪುಂಡಾಟ ಮೆರೆದ ಯುವಕರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
PublicNext
02/04/2022 03:19 pm