ಬೆಂಗಳೂರು: ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಶಿವಮೊಗ್ಗ ನಗರದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆನ್ನು ಈಗಾಗಲೇ ಎನ್ಐಎಗೆ ವಹಿಸಲಾಗಿದ್ದು, ಇದೀಗ ಎನ್‌ಐಎ ತಂಡ ಪ್ರಕರಣದ ತನಿಖೆ ಆರಂಭಿಸಿದೆ.
ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಕೇಸ್ʼನ್ನ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಅಧಿಕೃತವಾಗಿ ತಮ್ಮ ಕಚೇರಿಯಲ್ಲಿ ಕಾರ್ಯ ಆರಂಭಿಸಿದ್ದಾರೆ. ಇನ್ನು ದೊಮ್ಮಲೂರಲ್ಲಿ ಎನ್‌ಐಎ ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದ್ದು, ಓರ್ವ ಡಿಐಜಿ, ಒಬ್ಬ ಎಸ್ಪಿ, ಇನ್ಸ್ಪೆಕ್ಟರ್, ಪಿಎಸ್ಐ, ಎಎಸ್ಐ, ಹೆಚ್ಸಿಸಿ, ಪಿಸಿ ಸೇರಿದಂತೆ 20 ಜನ ಸಿಬ್ಬಂದಿಯನ್ನು ನೇಮಿಸಲಾಗಿದೆ.
PublicNext
29/03/2022 11:01 pm