ವಿಜಯಪುರ : ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮಳಜಿ ನಿವಾಸದಲ್ಲಿ ಕಂತೆ ಕಂತೆ ಹಣ ಚಿನ್ನಾಭರಣ ಪತ್ತೆಯಾಗಿದೆ.
ವಿಜಯಪುರ ನಗರದ ಬಂಜಾರ ಕ್ರಾಸ್ ಬಳಿ ಇರುವ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಚಿನ್ನದ ಸರ, ನೆಕ್ಲೆಸ್, ಬಳೆ, ಉಂಗುರ, ಕಿವಿ ಓಲೆ, ಬೆಳ್ಳಿ ಆಭರಣ ಪತ್ತೆಯಾಗಿದೆ.
ಕಚೇರಿ, ಮನೆ, ಸಂಬಂಧಿಕರ ಮನೆ, ಕಚೇರಿ ಸಿಬ್ಬಂದಿಗಳ ಮನೆಯ ಮೇಲೆ ದಾಳಿ ನಡೆದಿದೆ. ಈ ಹಿಂದೆ 2013ರಲ್ಲಿ ಲೋಕಾಯುಕ್ತ ದಾಳಿಯು ನಡೆದಿತ್ತು. ಆ ವೇಳೆ 4 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿತ್ತು.
ಸದ್ಯ ಗೋಪಿನಾಥ ವಿರುದ್ಧ 2 ಕೋಟಿಗೂ ಅಧಿಕ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಎಸಿಬಿಗೆ ದೂರು ಬಂದ ಬೆನ್ನಲ್ಲೇ ಇಂದು ರೇಡ್ ನಡೆಸಿದ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಬಂಗ್ಲೆಯಂತ ಮನೆಯಲ್ಲಿ ಲಕ್ಷ-ಲಕ್ಷ ಮೌಲ್ಯದ ಐಷಾರಾಮಿ ಜಾಕೊಜಿ ಸ್ಟಿಮ್ ಬಾತ್ ರೂಂ ಕಂಡ ಅಧಿಕಾರಿಗಳೇ ಶಾಕ್ ಆಗಿದ್ದು ಸದ್ಯ ಸರ್ಕಾರಿ ಇಂಜಿನಿಯರ್ ಗಳನ್ನ ಕರೆಯಿಸಿ ವ್ಯಾಲಿವೇಷನ್ ಮಾಡಿಸಲು ಮುಂದಾಗಿದ್ದಾರೆ.
PublicNext
16/03/2022 10:50 am