ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಹತ್ಯೆಯಿಂದ ಹೊತ್ತಿ ಉರಿಯುತ್ತಿದೆ ಶಿವಮೊಗ್ಗ : ಕಲ್ಲು ತೂರಾಟದಲ್ಲಿ ಓರ್ವ ಯುವಕ ಗಂಭೀರ

ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪರಿಸ್ಥಿತಿ ಕೈಮಿರಿದೆ. ಇನ್ನು ಹತ್ಯೆಗಿಡಾದ ಹರ್ಷ ಮೃತ ದೇಹ ಮೆರವಣಿಗೆ ಮಾಡುವ ವೇಳೆ ಹಿಂಸಾಚಾರ ನಡೆದಿದೆ. ಉದ್ರಿಕ್ತರಿಂದ ಕಲ್ಲು ತೂರಾಟ ನಡೆದಿದೆ.

ಸಿದ್ಧಯ್ಯ ರಸ್ತೆಯಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸದ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಪೊಲೀಸರು ಸಹ ನಿಸ್ಸಾಹಯಕರಾಗಿದ್ದಾರೆ.

ಹರ್ಷನ ನಿವಾಸಕ್ಕೆ ಮೃತದೇಹ ತಂದ ನಂತರ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರುಗಳು ಅಂತಿಮ ದರ್ಶನ ಪಡೆದರು. ನಂತರ ಮೃತ ದೇಹವನ್ನು ರೋಟರಿ ಚಿತಾಗಾರಕ್ಕೆ ಮೆರವಣಿ ಮೂಲಕ ತೆಗೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಮತ್ತೆ ಕಲ್ಲುತೂರಾಟ ಆರಂಭವಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕಲ್ಲು ತೂರಾಟದಿಂದ ಹಲವು ಮಂದಿಗೆ ಗಾಯವಾಗಿದ್ದು, ಓರ್ವನಿಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ ನಡೆಸಲಾಗಿದ್ದು, ಕೆಲವು ಕಡೆಗಳಲ್ಲಿ ಟಿಯರ್ ಗ್ಯಾಸ್ ಪ್ರಯೋಗ ಮಾಡಲಾಗಿದೆ.

ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

21/02/2022 03:20 pm

Cinque Terre

173.33 K

Cinque Terre

30

ಸಂಬಂಧಿತ ಸುದ್ದಿ