ಆ ವ್ಯಕ್ತಿ ನಾಪತ್ತೆಯಾಗಿ 7 ವರ್ಷಗಳೇ ಕಳೆದಿತ್ತು. ಕುಟುಂಬದವರು ಪೊಲೀಸ್ ದೂರು ನೀಡಿ, ಹುಡುಕಾಟವನ್ನೂ ನಡೆಸಿ ಸೋತಿದ್ದರು. ಕೊನೆಗೆ ಆತ ಪತ್ತೆಯಾಗಿದ್ದು ಆಂಧ್ರ ಮಣ್ಣಲ್ಲಿ ಶವವಾಗಿ!
2015ರಲ್ಲಿ ಕಾಮಾಕ್ಷಿಪಾಳ್ಯ ನಿವಾಸಿ ವಜೀರ್ ನಾಪತ್ತೆಯಾಗಿದ್ದ. ಏರಿಯಾದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆತ, ಹೋಗಿದ್ದೆಲ್ಲಿ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಮಿಸ್ಸಿಂಗ್ ಕಂಪ್ಲೇಂಟ್ ಆಗಿ ಪೊಲೀಸ್ರು ಹುಡುಕಾಟ ನಡೆಸಿದ್ರು. ಬಳಿಕ ಆತ ಸಿಗದೇ ಇದ್ದಾಗ ಕೈತೊಳೆದುಕೊಂಡಿದ್ರು.
ಇವ್ರು ಹೀನಾ ಕೌಸರ್- ಮಹಮ್ಮದ್ ಗೌಸ್ ದಂಪತಿ. ಸುಂಕದಕಟ್ಟೆಯಲ್ಲಿ ಗಾರ್ಮೆಂಟ್ ಕೆಲಸ. ಕೌಸರ್ ಗೆ ವಜೀರ್ ಹಣಕಾಸಿನ ಸಹಾಯ ಮಾಡಿದ್ದ. ಬಳಿಕ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಶುರುವಾಗಿತ್ತು. ಇನ್ನು ಅದೊಂದು ದಿನ ಈ ಕಹಾನಿ ಪತಿ ಗೌಸ್ ಗೆ ಗೊತ್ತಾಯಿತು. ಇದೇ ವಿಚಾರವಾಗಿ ಪತ್ನಿ ಜೊತೆ ಜಗಳವಾಡಿದ್ದ. ನಂತರ ದಂಪತಿ, ವಜೀರ್ ನನ್ನು ಈ ಲೋಕದಿಂದಲೇ ಪಾರ್ಸೆಲ್ ಮಾಡೋ ಪ್ಲಾನ್ ಮಾಡಿದ್ರು!
2015ರ ಮೇ 13ರಂದು ತಮ್ಮ ಮನೆಗೆ ಕರೆಸಿಕೊಂಡರು. ಕೌಸರ್ ಮೋಡಿ ಮಾತಿಗೆ ಮರುಳಾಗಿ ಆಸೆ- ಆತುರದಿಂದ ವಜೀರ್, ಕೌಸರ್ ಮನೆಗೆ ಬಂದಿದ್ದ. ವಜೀರ್, ಕೌಸರ್ ನೊಂದಿಗೆ ʼಸುಖʼದ ಉತ್ತುಂಗದ ಕ್ಷಣದಲ್ಲಿದ್ದಾಗ ಸೀರೆಯಿಂದ ವಜೀರ್ ಕುತ್ತಿಗೆಗೆ ಕುಣಿಕೆ ಹಾಕಿದ್ಲುಕೌಸರ್. ಈ ವೇಳೆ ಗೌಸ್ ಕೂಡ ವಜೀರ್ ನ ಉಸಿರುಗಟ್ಟಿಸಿ ಪ್ರಾಣ ತೆಗೆದಿದ್ರು.
ವಜೀರ್ ಸತ್ತ ನಂತರ ಪ್ಲಾಸ್ಟಿಕ್ ಚೀಲದಲ್ಲಿ ದೇಹ ಪ್ಯಾಕ್ ಮಾಡಿ, ವಜೀರ್ ಬೈಕ್ ನಲ್ಲೇ ಆಂಧ್ರದ ಹಿಂದೂಪುರಕ್ಕೆ ಶಿಫ್ಟ್ ಮಾಡಿದ್ರು. ಅಂದಿನಿಂದ ಆಂಧ್ರ ಸುತ್ತಮುತ್ತ ದಂಪತಿ ವಾಸವಿದ್ರು. ಇತ್ತ ಆಂಧ್ರ ಪೊಲೀಸ್ರು ಅನಾಥ ಶವ ಅಂತ ಮಣ್ಣು ಮಾಡಿದ್ರು. ಕಳೆದ ವಾರ ಗೌಸ್ ಮತ್ತೆ ಕಾಮಾಕ್ಷಿಪಾಳ್ಯಗೆ ಬಂದಾಗ ಪೊಲೀಸ್ರ ಕೈಗೆ ಲಾಕ್ ಆದ. ವಜೀರ್ ಮಿಸ್ ಆದಾಗಿನಿಂದ ಈತನೂ ಮಿಸ್ ಆಗಿದ್ದ ಹಿನ್ನೆಲೆ ಪೊಲೀಸ್ರು ವರ್ಕ್ ಮಾಡಿದಾಗ ಕೊಲೆಯ ಪಿನ್ ಟು ಪಿನ್ ರಹಸ್ಯ ಹೊರ ಹಾಕಿದ್ದಾನೆ.
PublicNext
17/02/2022 04:48 pm