ಶ್ರೀನಗರ: ಕಾಶ್ಮೀರದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯ ಕುರಿತು ನ್ಯಾಯಾಂಗ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದೇಶಿಸಿದ್ದಾರೆ. ಶ್ರೀನಗರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಖುರ್ಷಿದ್ ಅಹ್ಮದ್ ಶಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಮನೆಯೊಂದರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಉಗ್ರಗಾಮಿ, ಆತನ ಸಹಚರ ಮೊಹಮ್ಮದ್ ಅಮೀರ್ ಮ್ಯಾಗ್ರೆ ಮತ್ತು ಭೂಮಾಲೀಕ ಮೊಹಮ್ಮದ್ ಅಲ್ತಾಫ್ ಭಟ್ ಮತ್ತು ಅವನ ಬಾಡಿಗೆದಾರ ಮುದಾಸಿರ್ ಗುಲ್ ಕೊಲ್ಲಲ್ಪಟ್ಟರು. ಮಾಗ್ರೆ, ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್‌ಗೂ ಉಗ್ರರಿಗೂ ಯಾವುದೇ ಸಂಬಂಧವಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
PublicNext
20/11/2021 07:48 am