ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರವ್ ಮೋದಿಗೆ ಮತ್ತೆ ನಿರಾಶೆ : ಅರ್ಜಿ ವಜಾಗೊಳಿಸಿದ ಕೋರ್ಟ್

ವಾಷಿಂಗ್ಟನ್: ಕೋಟ್ಯಂತರ ರೂ. ವಂಚನೆ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಮೂಲದ ಡೈಮಂಡ್ ವ್ಯಾಪಾರಿ ನೀರವ್ ಮೋದಿಗೆ ಅಮೆರಿಕ ಕೋರ್ಟ್ ನಿಂದ ಮತ್ತೆ ನಿರಾಸೆಯಾಗಿದೆ.

ಹೌದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಪ್ರಮುಖ ಆರೋಪಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ತಾವೇ ಮಾಲಿಕರಾಗಿದ್ದ ಮೂರು ಕಂಪನಿಗಳ ನಿಯೋಜಿತ ಟ್ರಸ್ಟಿಯೊಬ್ಬರು, ತಮ್ಮ ಮೇಲೆಯೇ ಮಾಡಿರುವ ಆರೋಪಗಳನ್ನು ರದ್ದು ಮಾಡಬೇಕೆಂದು ನ್ಯೂಯಾರ್ಕ್ ನ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ತಿರಸ್ಕರಿಸಿದೆ.

ನ್ಯಾಯಾಲಯವೇ ಫೈರ್ ಸ್ಟಾರ್ ಡೈಮಂಡ್, ಫ್ಯಾಂಟಸಿ ಇಂಕ್, ಎ ಜಾಫೆ ಕಂಪನಿಗಳಿಗೆ ರಿಚರ್ಡ್ ಲೆವಿನ್ ರನ್ನು ಟ್ರಸ್ಟಿಯಾಗಿ ನೇಮಿಸಿತ್ತು. ಲೆವಿನ್ ಅವರು ನೀರವ್ ಮೋದಿ ಮತ್ತವರ ಸಹಾಯಕರಾದ ಮಿಹಿರ್ ಭನ್ಸಾಲಿ, ಅಜಯ್ ಗಾಂಧಿಯವರ ವಿರುದ್ಧ ತೀವ್ರತರ ಆರೋಪಗಳನ್ನು ಮಾಡಿದ್ದರು.

ಹಾಗೆಯೇ ಅವರಿಗೆ ಸಾಲ ನೀಡಿರುವ ವ್ಯಕ್ತಿಗಳಿಗೆ ಕನಿಷ್ಠ 15 ಮಿಲಿಯನ್ ಡಾಲರ್ (112 ಕೋಟಿ ರೂ.) ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಇದನ್ನು ರದ್ದುಗೊಳಿಸುವಂತೆ ನೀರವ್ ಮನವಿ ಸಲ್ಲಿಸಿದ್ದರು.

Edited By : Nirmala Aralikatti
PublicNext

PublicNext

19/10/2021 10:54 pm

Cinque Terre

59.77 K

Cinque Terre

3

ಸಂಬಂಧಿತ ಸುದ್ದಿ