ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಂಗವಿಕಲರಿಗೆ ಕುಕ್ಕರ್ ಗಳನ್ನು ವಿತರಿಸಿದ ಕುರಿತು ತಾಲೂಕಿನ ಬೈಚವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಹೌದು.. ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬೈಚವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಅಂಗವಿಕಲರಿಗೆ ನೀಡಲೆಂದು ತಂದಿದ್ದ ಕುಕ್ಕರ್ಗಳನ್ನು ವಿತರಿಸಿದ್ದಾರೆ ಎಂದು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಫಲಾನುಭವಿಗಳಿಗೆ ಈ ರೀತಿಯ ಆಮಿಷಗಳನ್ನು ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೈಚವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ 100 ಜನ ಅಂಗವಿಕಲರಿಗೆ ಶೇ. 5ರ ಅನುದಾನದಲ್ಲಿ ಕುಕ್ಕರ್ಗಳನ್ನು ನೀಡಲು ಗ್ರಾಪಂ ಸಭೆ ತೀರ್ಮಾನಿಸಿತ್ತು.
ಅದನ್ನು ಅ. 2ರಂದು ಹೊಸಕೊಪ್ಪ ಗ್ರಾಮದ ಕೆಲವು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಗ್ರಾಪಂ ಸದಸ್ಯರೇ ಫಲಾನುಭವಿಗಳ ಹೇಳಿಕೆ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಗ್ರಾಪಂ ಎದುರು ಸದಸ್ಯರು ಧರಣಿ ನಡೆಸಿದ್ದಾರೆ.
PublicNext
04/10/2021 05:23 pm