ಮುಂಬೈ : ಸಂಕಷ್ಟದ ಸುಳಿಯಲ್ಲಿ ಖ್ಯಾತ ಗೀತರಚನಾಕಾರ, ಕವಿ ಜಾವೇದ್ ಅಖ್ತರ್ ಕಾರಣ ಅವರು ನೀಡಿದ ಅವಹೇಳನಕಾರಿ ಹೇಳಿಕೆ. ಹೌದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ ಎನ್ನುವ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ.
ಸದ್ಯ ಇವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಪ್ರತ್ಯೇಕ ಕೇಸ್ ಗಳು ಅವರ ಮೇಲೆ ದಾಖಲಾಗಿದೆ. ಈ ಸಂಬಂಧ ಅವರಿಗೆ ಲೀಗಲ್ ನೋಟೀಸ್ ಕಳಿಸಲಾಗಿದೆ.
‘ಸೆ.4ರಂದು ಜಾವೇದ್ ಅಖ್ತರ್ ಅವರು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಹಿಂದೂ ಸಂಘಟನೆಗಳನ್ನು ತಾಲಿಬಾನ್ ಗೆ ಹೋಲಿಸಿದ್ದನ್ನು ನಾನು ಗಮನಿಸಿದ್ದೇನೆ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳ ಮಾನಹಾನಿ ಮಾಡುವ ಉದ್ದೇಶದಿಂದಲೇ ಜಾವೇದ್ ಅಖ್ತರ್ ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಆರ್ ಎಸ್ ಎಸ್ ಈ ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ ಅಂತ ಅವರು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ. ಆರ್ ಎಸ್ ಎಸ್ ಗೆ ಸೇರುವವರನ್ನು ದಾರಿ ತಪ್ಪಿಸಲು ಇಂಥ ಹೇಳಿಕೆ ನೀಡಲಾಗಿದೆ’ ಎಂದು ವಕೀಲರೂ ಆಗಿರುವ ಆರ್ ಎಸ್ ಎಸ್ ಕಾರ್ಯಕರ್ತ ದೃಷ್ಟಿಮಾನ್ ಜೋಶಿ ಅವರು ಕ್ರಿಮಿನಲ್ ದೂರು ನೀಡಿದ್ದಾರೆ.
ಅ.30ರಂದು ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
PublicNext
23/09/2021 04:18 pm