ಚಿಕ್ಕೋಡಿ: ಅಥಣಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಥಣಿ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ.
ಎಇಇ ರಾಜೇಂದ್ರ ಪರ್ನಾಕರ ಹಾಗೂ ದೀಪಕ ಕುಲಕರ್ಣಿ ಅವರು ಗುತ್ತಿಗೆದಾರರಿಂದ ೬೮೦೦೦ ಸಾವಿರ ರೂಪಾಯಿ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರ ಮೇಲೆ ಆಗಾಗ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಎಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಪಡೆದುಕೊಂಡರು ಭ್ರಷ್ಟಾಚಾರ ಎಸಗಿದ್ದ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ನೇತೃತ್ವವನ್ನು ಡಿಸಿಪಿ ಕರುಣಾಕರ ಶೆಟ್ಟಿ , ಎಸಿಬಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಎ.ಎಸ್.ಬುದಿಕೊಪ್ಪ ಹಾಗೂ ಸುನೀಲಕುಮಾರ.ಎಚ್ ವಹಿಸುತ್ತಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳು ಕಚೇರಿಯಲ್ಲಿ ಕಾಗದದ ಪತ್ರ ಪರಿಶೀಲನೆ ನಡೆಸಿದ್ದಾರೆ.
PublicNext
22/09/2021 06:57 pm