ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಐ ಲವ್ ತಾಲಿಬಾನ್' ಎಂದು ಕಾಮೆಂಟ್ ಮಾಡಿದ್ದ ಕಿರಾತಕ ಅರೆಸ್ಟ್

ಬಾಗಲಕೋಟೆ: 'ಐ ಲವ್ ತಾಲಿಬಾನ್' ಎಂದು ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಕಾಮೆಂಟ್ ಹಾಕಿದ್ದ ಕಿಡಿಗೇಡಿಯನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿ ಪೊಲೀಸರು ಬಲೆಗೆ ಕೆಡವಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಆಸೀಫ್ ಗಲಗಲಿ, ಅವಿವೇಕಿ ತಾಲಿಬಾನ್ ಉಗ್ರರ ಬಗ್ಗೆ 'ಪ್ರೀತಿ' ತೋರಿದ್ದನು. ತಾಲಿಬಾನ್ ಪರವಾಗಿ ಕಾಮೆಂಟ್ ಹಾಕಿದ ಈ ಕಿಡಿಗೇಡಿಯ ಕೃತ್ಯವನ್ನು ಆತನ ಸಮುದಾಯದವರೇ ತೀವ್ರವಾಗಿ ಖಂಡಿಸಿದ್ದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಿರುಕುಳ ಹಿನ್ನೆಲೆಯಲ್ಲಿ ಅಫ್ಘಾನ್ ದೇಶ ಬಿಟ್ಟು ಜನ ಓಡಿ ಹೋಗುತ್ತಿದ್ದಾರೆ. ಹೀಗಿರುವಾಗ ತಾಲಿಬಾನಿಗಳ ಮೇಲೆ ಪ್ರೀತಿ ತೋರಿದ್ದಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿತ್ತು. ಜಮಖಂಡಿ ಠಾಣೆ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

22/08/2021 10:22 am

Cinque Terre

54.58 K

Cinque Terre

58

ಸಂಬಂಧಿತ ಸುದ್ದಿ