ಯಾದಗಿರಿ : ಜಿಲ್ಲೆ ಹಾಗೂ ವಡಗೇರಾ ತಾಲ್ಲೂಕಿನಲ್ಲಿ ಮೆನೆ ಕಳ್ಳತನ ಮಾಡ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ತಿಂಗಳು 21ರಂದು ಯಾದಗಿರಿಯ ಜಿರಂಜೀವಿ ನಗರದ ಧರ್ಮರಾಜ ಎಂಬುವವರ ಮನೆಯಲ್ಲಿ 3 ತೊಲೆ ಬಂಗಾರ ಹಾಗೂ 25 ಸಾವಿರ ರೂಪಾಯಿ ಕಳವು ಮಾಡಿದ್ದರು. ಅಲ್ಲದೇ ಅದೇ ದಿನ ಹೊಸಹಳ್ಳಿ ಕ್ರಾಸ್ ಬಳಿ ಇರೋ ಎಲ್ಲೆಂಟಿ ಆಫೀಸ್ ನಲ್ಲಿ 3 ಲ್ಯಾಪ್ ಟಾಪ್ ಎಗರಿಸಿದ್ದರು.
ಇನ್ನು ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಜೂನ್ 15ರಂದು ರಾತ್ರಿ ವೇಳೆ ಮಾಳಪ್ಪ ಎಂಬುವವರ ಮನೆ ಬೀಗ ಮುರಿದು 3 ತೊಲೆ ಬಂಗಾರ ಹಾಗೂ ಒಂದು ಮೊಬೈಲ್ ಕಳ್ಳತನವಾಗಿತ್ತು.
ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ, ಡಿವೈಎಸ್ಪಿ ಸಂತೋಷ ಬನಹಟ್ಟಿ ಮಾರ್ಗದರ್ಶನದಂತೆ ಸಿಪಿಐ ಕೆಂಚರೆಡ್ಡಿ ನೇತೃತ್ವದಲ್ಲಿ ಯಾದಗಿರಿ ನಗರ ಠಾಣೆ ಪಿಎಸ್ಐ ಸೌಮ್ಯ ಎಸ್. ಆರ್. ಹಾಗೂ ಪಿಎಸ್ಐ ವೀರಣ್ಣ ಹಾಗೂ ವಡಗೇರಾ ಪಿಎಸ್ ಐ ಅಬ್ದುಲ್ ಅಜಿಜ್ ಮತ್ತು ಸಿಬ್ಬಂದಿ ತಂಡ ರಚಿಸಿ ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಖಾಕಿ ಖೆಡ್ಡಾಗೆ ಕೆಡವಿದ್ದಾರೆ.
ಇನ್ನು ಆರೋಪಿಗಳಾದ ಬನ್ನಪ್ಪ ಕಂಬಾರ, ಬನ್ನಪ್ಪ ತಿಪ್ಪಕನೋರ ಈ ಇಬ್ಬರು ಕಳ್ಳರಿಂದ 3 ತೊಲೆ ಬಂಗಾರ, ಮೂರು ಲ್ಯಾಪ್ ಟಾಪ್ ಹಾಗೂ ಒಂದು ಮೊಬೈಲ್ ಹಾಗೂ 15 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ವಡಗೇರಾ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಆರೋಪಿ ಭೀಮಣ್ಣ ಕಾವಲಿಯಿಂದ 1 ಲಕ್ಷ 42 ಸಾವಿರ ರೂಪಾಯಿ, 3 ತೊಲೆ ಬಂಗಾರ ಹಾಗೂ ಒಂದು ಮೊಬೈಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
PublicNext
03/08/2021 04:25 pm