ಗ್ಯಾಸ್ ಕಟರ್ ಬಳಸಿ ಎಟಿಎಂ ದೋಚಿದ್ದ ಕಳ್ಳರ ಬೆನ್ನು ಹತ್ತಿದ ಮಾದನಾಯಕನಹಳ್ಳಿ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ದೇಶದ ಸಾರ್ವಭೌಮತ್ವ ಪಡೆಯುತ್ತಿದ್ದ ಬಾಂಗ್ಲಾ ಗ್ಯಾಂಗ್ ನ ಪತ್ತೆಮಾಡಿದ್ದಾರೆ. ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡದ ಈ ಕಾರ್ಯಕ್ಕೆ ಗೃಹಮಂತ್ರಿ ಆರಗ ಜ್ಞಾನೇಂದ್ರ ಅಭಿನಂದನೆ ತಿಳಿಸಿದ್ದಾರೆ. ಅಷ್ಟಕ್ಕೂ ನಕಲಿ ಜಾಲ ಹೇಗೆ ಕೆಲಸ ಮಾಡ್ತಿತ್ತು? ಅವ್ರ ಹಿನ್ನೆಲೆ ಏನು ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
ಕಳೆದ ತಿಂಗಳು ಮಾದನಾಯಕನಹಳ್ಳಿ ಠಾಣವ್ಯಾಪ್ತಿಯಲ್ಲಿ ಎಟಿಎಂ ಜೊತೆಗೆ 18 ಲಕ್ಷ ರೂಪಾಯಿಗಳ ಲೂಟಿ ಪ್ರಕರಣ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ಅಕ್ರಮವಾಗಿ ದೇಶ ನುಸುಳಿದ್ದ ಬಾಂಗ್ಲಾದೇಶ ಪ್ರಜೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿದೆ. ಅಧಿಕೃತ ಮಾಹಿತಿಗಳ ಪ್ರಕಾರ ಪ್ರಕರಣದಲ್ಲಿ ಬಾಂಗ್ಲಾದ ಸಯುಲ್ ಅಕೂನ್ @ ಶಾಹೀದ್ ಅಹಮದ್, ಆತನ ಮಗ ಹಾಗೂ ಸೈಯ್ಯದ್ ಅಲೀಮ್ ಬಂಧನವಾಗಿದೆ. ಇವ್ರ ಜೊತೆಗೆ ಸ್ಥಳೀಯವಾಗಿ ಆರೋಪಿಗಳಿಗೆ ಸಹಾಯ ಮಾಡ್ತಿದ್ದ ಸುಹೇಲ್ ಅಹಮದ್, ಮೊಹಮ್ಮದ್ ಇದಾಯತ್, ಅಮೀನ್ ಸೇಟಡ್ , ಸಾಫ್ಟ್ ವೇರ್ ಇಂಜಿನಿಯರ್ ರಾಕೇಶ್, ಬಿಬಿಎಂಪಿ ಆಯಿಷ ,ಮನ್ಸೂರ್ ,ಮತ್ತು ಇಸ್ತಿಯಾಕ್ ನ ಮಾದನಾಯಕನಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಸೈದುಲ್ ಅಕೂನ್. ಈತ ಬಾಂಗ್ಲಾದಿಂದ ಬರುವ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿಕೊಡ್ತಿದ್ದ. ತನಿಖೆಯಲ್ಲಿ ಸುಮಾರು 31 ಆಧಾರ್ ಪತ್ತೆಯಾಗಿದ್ದು. 90ಕ್ಕೂ ಹೆಚ್ಚು ಆಧಾರ್ ಎನ್ರೋಲ್ ಪ್ರತಿಗಳು ಸಿಕ್ಕಿವೆ. ಸದ್ಯ ಪೊಲೀಸ್ರು ಈ ಆಧಾರ್ ಪಡೆದ ಬಾಂಗ್ಲಾ ಪ್ರಜೆಗಳ ಹಿಂದೆ ಬಿದ್ದಿದ್ದಾರೆ.
ಜೊತೆಗೆ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಬಾಂಗ್ಲಾದೇಶಿ ಕರೆನ್ಸಿ ಆಗಿ ಪರಿವರ್ತಿಸಿ ಆ ದೇಶಕ್ಕೆ ಈಗಾಗಲೇ ವರ್ಗಾವಣೆ ಗೊಳಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನೂ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಕಾರ್ಯಕ್ಕೆ ಐಜಿಪಿ ಚಂದ್ರಶೇಖರ್ ಪ್ರಶಂಸೆ ವ್ಯಕ್ತ ಪಡಿಸಿದ್ದು 75 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
PublicNext
11/06/2022 06:24 pm