ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಕೈ ಪಂಪ್‌​ನಲ್ಲಿ ನೀರು ಬರಲ್ಲ ಮದ್ಯ ಬರುತ್ತೆ; ದಾಳಿ ಮಾಡಿದ ಅಬಕಾರಿ ಅಧಿಕಾರಿಗಳಿಗೆ ಶಾಕ್!

ಮಧ್ಯಪ್ರದೇಶ : ಕೈ ಪಂಪ್‌ಗಳು ಸಾಮಾನ್ಯವಾಗಿ ನೀರು ಪೂರೈಕೆಗೆ ಮಾಡೋದನ್ನ ನಾವು ನೋಡಿರ್ತಿವಿ. ಆದ್ರೆ ಇಲ್ಲೊಂದು ಹ್ಯಾಂಡ್​ಪಂಪ್​ನಲ್ಲಿ ನೀರು ಬದಲಿ ಮದ್ಯ ಬರುತ್ತಿದ್ದು, ದಾಳಿ ಮಾಡಿದ ಅಬಕಾರಿ ಅಧಿಕಾರಿಗಳಿಗೆ ಶಾಕ್ ಆದಂತಿದೆ.

ಹೌದು.. ಮಧ್ಯಪ್ರದೇಶದ ಗುನಾ ಜಿಲ್ಲೆಯ ಭಾನ್‌ಪುರ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪೊಲೀಸರು ಅಕ್ರಮ ಮದ್ಯದ ಅಡ್ಡೆಯನ್ನು ಭೇದಿಸಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಾಗ ಹ್ಯಾಂಡ್ ಪಂಪ್ ಮದ್ಯವನ್ನು ಹೊರಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಸೋಮವಾರ ಗ್ರಾಮದ ಮೇಲೆ ದಾಳಿ ನಡೆಸಿದಾಗ ಶೋಧ ಕಾರ್ಯದಲ್ಲಿ, ಜಮೀನುಗಳಲ್ಲಿನ ಮೇವಿನ ಅವಶೇಷಗಳಡಿಯಲ್ಲಿ ಬಚ್ಚಿಟ್ಟಿದ್ದ 1,200 ಲೀ. ಕಚ್ಚಾ ಮದ್ಯ ಸಂಗ್ರಹಿಸಿದ್ದ,ಒಟ್ಟು ಎಂಟು ಡ್ರಮ್‌ಗಳನ್ನು ವಶಪಡಿಸಿಕೊಂಡರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದರು.

Edited By : Abhishek Kamoji
PublicNext

PublicNext

13/10/2022 07:51 pm

Cinque Terre

188.61 K

Cinque Terre

2

ಸಂಬಂಧಿತ ಸುದ್ದಿ