ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ್ಯಂಕರ್ ಅನುಶ್ರೀ ಬಂಧನದಿಂದ ಬಚ್ಚಾವ್ ಮಾಡತ್ತಿರೋ ಈ ಷುಗರ್ ಡ್ಯಾಡಿ ಯಾರು?

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಂಕರ್ ಅನುಶ್ರೀ ಯನ್ನಾ ಸಿಸಿಬಿ ವಿಚಾರಣೆ ನಡಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಸಧ್ಯ ಪ್ರಶಾಂತ್ ಸಂಬರಗಿ ಟ್ವಿಟರ್ ನಲ್ಲಿ ಅನುಶ್ರೀ ವಿಷಯದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸಿಸಿಬಿಯಿಂದ ವಿಚಾರಣೆ ಎದುರಿಸಿರುವ ಮಾತ್ರಕ್ಕೆ ನಾನು ಅಪರಾಧಿಯಲ್ಲ’ ಎಂದು ನಟಿ ಹಾಗೂ ನಿರೂಪಕಿ ಅನುಶ್ರೀ ಇಂದು ಬೆಳಿಗ್ಗೆ ವಿಡಿಯೊ ಸಂದೇಶದಲ್ಲಿ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೆ, ‘ಆಕೆಯ ರಕ್ಷಣೆಗೆ ಷುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ’ ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವಿಟರ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಸಂಜನಾ ಗರ್ಲಾನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದ ಅವರು, ಈಗ ಅನುಶ್ರೀ ವಿರುದ್ಧವೂ ಆರೋಪಗಳನ್ನು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಇಲ್ಲಿಯವರೆಗೂ ಅನುಶ್ರೀಯ ಬಂಧನವಾಗದಂತೆ ಷುಗರ್ ಡ್ಯಾಡಿ ತಡೆದಿದ್ದಾರೆ. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಆಕೆಯ ತಪ್ಪಿಗೆ ಶಿಕ್ಷೆಯಾಗುವುದು ನಿಶ್ಚಿತ.

ಅನುಶ್ರೀಯ ಮತ್ತಷ್ಟು ರಹಸ್ಯಗಳು ಬಯಲಾಗುವುದು ಗ್ಯಾರಂಟಿ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಪ್ರಸ್ತಾಪಿಸಿರುವ ಈ ಷುಗರ್ ಡ್ಯಾಡಿ ಯಾರು ಎಂಬುದು ಕುತೂಹಲ ಮೂಡಿಸಿದೆ.

‘ಹಣ, ದುಬಾರಿ ವಸ್ತುಗಳು ಮತ್ತು ಅಮೂಲ್ಯ ಉಡುಗೊರೆಗಳನ್ನು ನೀಡಿ ಅದಕ್ಕೆ ಪ್ರತಿಯಾಗಿ ಯುವತಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿಗೆ ಷುಗರ್ ಡ್ಯಾಡಿ ಎನ್ನುತ್ತಾರೆ’ ಎಂದು ಅವರೇ ಟ್ವೀಟ್ ನಲ್ಲಿ ವಿವರಣೆಯನ್ನೂ ನೀಡಿದ್ದಾರೆ.

Edited By : Nirmala Aralikatti
PublicNext

PublicNext

02/10/2020 09:23 pm

Cinque Terre

126.27 K

Cinque Terre

4

ಸಂಬಂಧಿತ ಸುದ್ದಿ