ಮಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಸಿಸಿಬಿಯಿಂದ ನೋಟಿಸ್ ಪಡೆದಿದ್ದ ನಟಿ ಆ್ಯಂಕರ್ ಅನುಶ್ರೀ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ.
ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದರು. ಆದರೆ ಮಂಗಳೂರು ತಲುಪುತ್ತಿದ್ದಂತೆ ಅನುಶ್ರೀ ವಿಚಾರಣೆಗೆ ಹಾಜರಾಗಿರಲಿಲ್ಲ.
ಹೀಗಾಗಿ ಇಂದು ಬೆಳಗ್ಗೆ ಪಣಂಬೂರು ಠಾಣೆಗೆ ಆಗಮಿಸಿದ್ದಾರೆ. ಸದ್ಯಕ್ಕೆ ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಪೊಲೀಸರಿಂದ ಅನುಶ್ರೀಯ ವಿಚಾರಣೆ ಆರಂಭಗೊಂಡಿದೆ.
ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿತ್ತು.
ನಿನ್ನೆ ಅನುಶ್ರೀ ವಿಚಾರಣೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಕ್ರೈಂ ಠಾಣೆ ಪೊಲೀಸರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು.
15 ಜನ ಅಧಿಕಾರಿಗಳು, ಸಿಬ್ಬಂದಿಯಿಂದ ವಿಚಾರಣೆಗೆ ತಯಾರಿ ಮಾಡಲಾಗಿತ್ತು. ಮೊದಲ ಹಂತದಲ್ಲಿ ಆರೋಪಿಗಳಾದ ಕಿಶೋರ್ ಅಮನ್, ತರುಣ್ ರಾಜ್ ಜೊತೆಗಿನ ಸಂಬಂಧ ಬಗ್ಗೆ ಪ್ರಶ್ನಿಸಿ, ಎರಡನೇ ಹಂತದಲ್ಲಿ ಸಾಕ್ಷ್ಯ ತೋರಿಸಿ ಅನುಶ್ರೀಗೆ ಪ್ರಶ್ನೆ ಮಾಡಲು ತಯಾರಿ ನಡೆಸಿದ್ದರು.
ಆದರೆ ಅನುಶ್ರೀ ನಿವಿಚಾರಣೆಗೆ ಹಾಜರಾಗಿಲ್ಲ.
PublicNext
26/09/2020 11:45 am