ಬೆಂಗಳೂರು: ಮಗ ಕಾಣೆಯಾಗಿದ್ದರ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆದರೆ ಠಾಣೆಯ ಇನ್ಸ್ಪೆಕ್ಟರ್ ಮಾತ್ರ ಎಫ್ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ಕರ್ತವ್ಯಲೋಪದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ಗೆ ಕಸ ಗುಡಿಸುವ ಶಿಕ್ಷೆ ವಿಧಿಸಲಾಗಿದೆ.
ಇಂತದ್ದೊಂದು ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಸ್ಟೇಷನ್ ಬಜಾರ್ ಠಾಣೆಯ ಇನ್ಸ್ಪೆಕ್ಟರ್ ಒಬ್ಬರು ಕಾಣೆಯಾದ ಬಗ್ಗೆ ದೂರೊಂದನ್ನು ಸ್ವೀಕರಿಸಿದ್ದಾರೆ. ನಂತರ ಇದು ನಮ್ಮ ಠಾಣೆ ವ್ಯಾಪ್ತಿಯಲ್ಲಿ ಇಲ್ಲ ಎಂದು ಎಫ್ಐಆರ್ ದಾಖಲಿಸದೇ ಸುಮ್ಮನಾಗಿದ್ದಾರೆ. ಇನ್ಸ್ಪೆಕ್ಟರ್ ತೋರಿದ ಈ ನಡೆ ವಿರುದ್ಧ ದೂರುದಾರರಾದ ತಾರಾಬಾಯಿ ಎಂಬುವವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಹಾಗೂ ಹಾಗೂ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠ, ತಮ್ಮ ವ್ಯಾಪ್ತಿಗೆ ಬಾರದ ನಾಪತ್ತೆ ಪ್ರಕರಣದ ಕುರಿತಾಗಿ ದೂರು ಸ್ವೀಕರಿಸಿ ನಂತರ ಅದನ್ನ ಅದೇ ವ್ಯಾಪ್ತಿಯ ಠಾಣೆಗೆ ವರ್ಗಾಯಿಸಬಹುದಿತ್ತು. ಅದರ ಹೊರತಾಗಿ ಮಹಿಳೆ ನೀಡಿದ ದೂರಿನ ಬಗ್ಗೆ ಇನ್ಸ್ಪೆಕ್ಟರ್ ನಿರ್ಲಕ್ಷ್ಯ ತೋರಿದ್ದಾರೆ ಎಂದ ನ್ಯಾಯಾಲಯ ಇನ್ಸ್ಪೆಕ್ಟರ್ ಗೆ ಒಂದು ವಾರ ಪೊಲೀಸ್ ಠಾಣೆಯ ಮುಂದಿನ ರಸ್ತೆಯಲ್ಲಿ ಕಸ ಗುಡಿಸುವ ಶಿಕ್ಷೆ ನೀಡಿದೆ.
ಇದಕ್ಕೆ ಪ್ರತಿಕ್ರಯಿಸಿದ ಇನ್ಸ್ಪೆಕ್ಟರ್ ಬೇಷರತ್ ಕ್ಷಮೆ ಕೇಳಿದ್ದಾರೆ. ಮತ್ತು ಇದು ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರ ವಹಿಸೋದಾಗಿ ಹೇಳಿದ್ದಾರೆ.
PublicNext
24/12/2020 09:54 am