ಬೆಂಗಳೂರು : ಡಿಜೆ ಮತ್ತು ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಸ್ ಡಿಪಿಐ, ಪಿಎಫ್ ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ದಾಳಿ ನಡೆಸಿದೆ.
ನಾಲ್ಕು ಎಸ್ ಡಿಪಿಐ ಕಚೇರಿ ಮತ್ತು ಪಿಎಫ್ ಐ ಕಚೇರಿ ಸೇರಿದಂತೆ ಬೆಂಗಳೂರು ನಗರದ 43 ಕಡೆ ಎನ್ ಐಎ ದಾಳಿ ನಡೆಸಿದೆ.
ದಾಳಿಯ ಕೆಲ ಸ್ಥಳಗಳಲ್ಲಿ ಚಾಕು, ಕಬ್ಬಿಣದ ರಾಡ್ ಸೇರಿದಂತೆ ಹಲವು ಮಾಕರಾಸ್ತ್ರಗಳನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದು ಎಂದು ತಿಳಿದು ಬಂದಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶದಿಂದ ಗಲಭೆಕೋರರು ಗಲಾಟೆ ಆರಂಭಿಸಿದ್ದರು.
ಮಾರಾಕಸ್ತ್ರಗಳ ಮೂಲಕ ಪೊಲೀಸರು, ಸಾರ್ವಜನಿಕ ಆಸ್ತಿ ಪಾಸ್ತಿ, ಖಾಸಗಿ ಆಸ್ತಿ ಪಾಸ್ತಿ, ವಾಹನಗಳು, ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದರು.
ಇದೇ ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಇಡಲಾಗಿತ್ತು.
PublicNext
18/11/2020 09:37 pm