ವಿಜಯಪುರ: ಕನ್ನಾಳ ಕ್ರಾಸ್ ಬಳಿ ಭೀಮಾ ತೀರದ ಮಹಾದೇವ ಭೈರಗೊಂಡ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 3 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರದ ಬಂಬಳ ಅಗಸಿ ನಿವಾಸಿ ಹಸನಡೋಂಗ್ರಿ ಬಡೇಗರ (24), ಕಲ್ಲಪ್ಪ/ಮುದಕಪ್ಪ ಬಜಂತ್ರಿ (24) ಹಾಗೂ ಈರಣ್ಣ ಅಶೋಕ ಬಜಂತ್ರಿ (21) ಬಂಧಿತ ಆರೋಪಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ 11 ಜನರನ್ನು ಬಂಧಿಸಲಾಗಿದೆ.
ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾಗಿ ಎಸ್ ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.
PublicNext
11/11/2020 07:08 pm