ನವದೆಹಲಿ-ಕಲ್ಲಿದ್ದಲು ಹಂಚಿಕೆಯಲ್ಲಿ ಅಕ್ರಮವೆಸಗಿದ್ದ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ದೆಹಲಿ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಾಜಪೇಯಿ ಸರ್ಕಾರದಲ್ಲಿ ದಿಲೀಪ್ ಕಲ್ಲಿದ್ದಲು ಸಚಿವರಾಗಿದ್ದರು. ಜಾರ್ಖಂಡ್ ಕಲ್ಲಿದ್ದಲು ಘಟಕದ ಅಕ್ರಮ ಹಂಚಿಕೆಯ ಹಗರಣದಲ್ಲಿ ಭಾಗಿಯಾಗಿದ್ದರು.
ದಿಲೀಪ್ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ 3 ವರ್ಷ ಜೈಲು ಹಾಗೂ ₹ 10ಲಕ್ಷ ದಂಡ ವಿಧಿಸಲಾಗಿದೆ.
PublicNext
26/10/2020 02:44 pm