ಮುಂಬೈ : ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯನ್ನು ಎಳೆದು ಥಳಿಸಿದ ಮಹಿಳೆಯನ್ನು ಬಂಧಿಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಎಲ್ ಟಿ ಮಾರ್ಗ್ ಠಾಣಾ ಪೊಲೀಸರು ಶುಕ್ರವಾರ 29 ವರ್ಷದ ಸಂಗರಿಕಾ ತಿವಾರಿ ಎಂಬಾಕೆಯನ್ನು ಬಂಧಿಸಿದ್ದಾರೆ.
ತಿವಾರಿ 32 ವರ್ಷದ ಮೋಹ್ಸಿನ್ ಶೇಕ್ ಎಂಬುವರ ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಬರುತ್ತಿದ್ದರಂತೆ.
ಈ ವೇಳೆ ಅವರನ್ನು ತಡೆದ ಪೇದೆ, ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದ್ದಾರೆ. ಇದೇ ವಿಚಾರ ತಾರಕ್ಕಕೆ ಹೋಗಿದೆ.
ಈ ವೇಳೆ ತಿವಾರಿ ಪೇದೆ ಪಾರ್ತೆ ಅವರ ಯೂನಿಫಾರ್ಮ್ ಗೆ ಕೈಹಾಕಿ ಎಳೆದಾಡಿ ಹಲ್ಲೆ ಮಾಡಿದ್ದಾರೆ.
ಪ್ರಕರಣ ಸಹ ಆರೋಪಿಯಾಗಿರುವ ಶೇಖ್ ಘಟನೆಯನ್ನು ವಿಡಿಯೋ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಆದರೆ, ತಿವಾರಿ ಪ್ರಕಾರ ಸಂಚಾರಿ ಪೇದೆ ಕೆಟ್ಟ ಪದಗಳಿಂದ ನಿಂದಿಸಿದರು. ಹೀಗಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ಜಗಳವನ್ನು ಬಿಡಿಸಿ, ತಿವಾರಿ ಮತ್ತು ಶೇಖ್ ನನ್ನು ಠಾಣೆಗೆ ಕರೆತಂದಿದ್ದಾರೆ.
PublicNext
24/10/2020 09:19 pm