ಒಮ್ಮೊಮ್ಮೆ ನಾವೆಷ್ಟು ಕ್ರೂರಿ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅಂತ ಅನಿಸುತ್ತೆ ಎಂದು ಅನೇಕ ನೆಟ್ಟಿಗರು, ಜನಸಾಮಾನ್ಯರು ಹೇಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಕಳೆದ ಕೆಲ ದಿನಗಳ ಹಿಂದಷ್ಟೇ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೃತ್ಯ ಎಸಗಿದ ಆರೋಪಿಗಳನ್ನು ಸದ್ಯ ಮಧ್ಯ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮತ್ತೆ ಅಂತಹ ಘಟನೆ, ಅಮಾನವೀಯ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಲು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎನ್ನುವ ಕೂಗ ಕೇಳಿ ಬರುತ್ತಿದೆ.
ಅಷ್ಟಕ್ಕೂ ಆಗಿದ್ದೇನು ಅಂತಿರಾ? ಇದು ಮಧ್ಯಪ್ರದೇಶದಲ್ಲಿ ಹಾಡಹಗಲೇ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ.
ಇಬ್ಬರು ಮಹಿಳೆಯರಿದ್ದ ಸ್ಕೂಟಿಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದರಿಂದ ಆತನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಮಾನವೀಯ ಘಟನೆ ಜಬಲ್ಪುರದಲ್ಲಿ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆಯ ದೃಶ್ಯವನ್ನು ನೋಡುತ್ತಾ ಕೈ ಕಟ್ಟಿ ನಿಂದಿದ್ದ ಜನರು:
ನಮ್ಮ ಜನಕ್ಕೆ ಕ್ರಿಕೆಟ್, ಕುಸ್ತಿ, ಕಬಡ್ಡಿ ಹಾಗೂ ಹಲ್ಲೆಗಳ ನಡುವೆ ವ್ಯತ್ಯಾಸವೇ ತಿಳಿಯುತ್ತಿಲ್ಲ ಎನ್ನುವುದು ನೆಟ್ಟಿಗರೊಬ್ಬರ ದೂರು. ಇದು ಅಕ್ಷರಶಃ ಸತ್ಯ ಎನ್ನುವಂತೆ ಅಧರ್ತಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಾಕ್ಷಿಯಾಗಿದೆ. ಯುವಕನೊಬ್ಬ ಆಟೋ ಚಾಲಕನನ್ನ ಹೊಡೆಯುತ್ತಿದ್ದರೆ
ಸ್ಥಳದಲ್ಲಿದ್ದ ಜನರು ಹಲ್ಲೆಯನ್ನು ತಡೆಯಲು ಪ್ರಯತ್ನಿಸಲೇ ಇಲ್ಲ. ಅನೇಕರು ಆ ದೃಶ್ಯವನ್ನ ನೋಡುತ್ತಾ ಸುಮ್ಮನೆ ನಿಂತಿದ್ದರೆ, ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.
PublicNext
14/10/2020 05:55 pm