ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಳಿವಯಸ್ಸಿಗೆ ಬೇಕು ನೆಮ್ಮದಿಯ ಜೀವನ ಸೊಸೆ ಕಾರ್ಯಕ್ಕೆ ಜನರ ಬೇಸರ

ಸಾಮಾನ್ಯವಾಗಿ ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ವಿವಿಧ ವಿಡಿಯೋ ಮತ್ತು ಫೋಟೋಗಳನ್ನು ಜನರು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅಮಾನವೀಯ ಮತ್ತು ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುವಲ್ಲಿಯೂ ಈ ಸಾಮಾಜಿಕ ಜಾಲತಾಣಗಳು ನೆರವಾಗುತ್ತವೆ.

ಹೌದು ಉತ್ತರ ಪ್ರದೇಶ ಭಾವುಪುರಾ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಮಾನವೀಯ ಕೃತ್ಯವೊಂದು ಸಾಮಾಜಿಕ ಜಾಲತಾಣಗಳಿಂದ ಬಯಲಿಗೆ ಬಂದಿದೆ.

ಮಹಿಳೆಯೊಬ್ಬಳು ತನ್ನ ವಯಸ್ಸಾದ ಅತ್ತೆ ಬತಖಶ್ರಿ ಗೆ ಸ್ವಲ್ಪವೂ ಕರುಣೆ ಇಲ್ಲದೇ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಈಗ ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಸೊಸೆ ಮುನ್ನಿದೇವಿ ವಿರುದ್ಧ ತೀರಾ ಖಂಡನೆ ವ್ಯಕ್ತವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹಿರಿಯರ ಮೇಲೆ ದರ್ಪತೋರುವ ಪ್ರವೃತಿ ಹೆಚ್ಚಾಗುತ್ತಿದೆ. ತಾವು ಮುಂದೊಂದು ದಿನ ಇದೇ ಹಂತಕ್ಕೆ ಬರುತ್ತೇವೆ ಎನ್ನುವುದನ್ನು ಮರೆತು ಸೊಸೆಯಾದವರು ವಯೋವೃದ್ಧ ಅತ್ತೆ ಮೇಲೆ ದರ್ಪತೋರಿರುವ ವಿಡಿಯೋವೊಂದು ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮಂಚದ ಮೇಲೆ ಮಲಗಿರುವ ವೃದ್ಧ ಅತ್ತೆಯನ್ನು ಸೊಸೆ ಪೊರಕೆ ಹಿಡಿದು ಥಳಿಸಿರುವ ವಿಡಿಯೋ ನಿಜಕ್ಕೂ ಮನಕಲಕುವಂತಿದೆ. ಈಗಾಗಗಲೇ ಜೀವನದ ಕೊನೆಯ ಘಟಕ್ಕೆ ಬಂದಿರುವ ಹಿರಿಯ ಜೀವಗಳು ಇಳಿವಯಸ್ಸಿನಲ್ಲಿ ಮಗುವಿನ ಹಂತ ತಲುಪಿರುತ್ತಾರೆ ಅವರನ್ನು ಸಂಬಾಳಿಸುವುದು ತುಸು ಕಷ್ಟವೆಂದು ಹಲವರು ಹೇಳುತ್ತಾರೆ. ಆದ್ರೆ ಮಕ್ಕಳಂತೆ ಪ್ರೀತಿ ಅವರ ವಯಸ್ಸಿಗೆ ಗೌರವ ಸೂಚಿಸುವ ಬದಲು ರಾಕ್ಷಸರಂತೆ ವರ್ತಿಸುವ ಪ್ರವೃತಿ ನಿಜಕ್ಕೂ ಬೇಸರದ ಸಂಗತಿ…

Edited By : Nagesh Gaonkar
PublicNext

PublicNext

21/01/2021 01:50 pm

Cinque Terre

188.09 K

Cinque Terre

29

ಸಂಬಂಧಿತ ಸುದ್ದಿ