ಚಿಕ್ಕಮಗಳೂರು: ಇವನ ಪಾಡಿಗೆ ಇವನು ಕಾರಲ್ಲಿ ಹೊರಟಿದ್ದ. ಅದೇ ರಸ್ತೆಯಲ್ಲಿ ಅವನ ಪಾಡಿಗೆ ಅವನು ಬೈಕ್ ಹತ್ತಿ ಹೊರಟಿದ್ದ. ಇದ್ದಕ್ಕಿಂದ್ದಂತೆ ನಾ ಮುಂದಾ? ನೀ ಮುಂದಾ ಎಂಬ ಓವರ್ ಟೇಕ್ ಜಿದ್ದಾ ಜಿದ್ದಿ ಇಬ್ಬರ ನಡುವೆಯೂ ಶುರುವಾಗಿದೆ. ಕೊನೆಗೆ ಕಂಟ್ರೋಲ್ ತಪ್ಪಿ ಇಬ್ಬರೂ ಹೋಗಿ ಗಾಡಿ ಸಮೇತ ಪಕ್ಕದ ಗದ್ದೆಗೆ ಹಾರಿದ್ದಾರೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಬಳಿ ನಡೆದಿದೆ.
ಕಾರಿನ ಚಾಲಕ ಮೂಡಿಗೆರೆಯಿಂದ ಕಳಸ ಸಮೀಪದ ಹಿರೇಬೈಲಿಗೆ ಹೊರಟಿದ್ದ. ಅದೇ ಮಾರ್ಗವಾಗಿ ಬೈಕ್ ಸವಾರ ಕೊಟ್ಟಿಗೆಹಾರದ ಮೂಲಕ ಮಾಗುಂಡಿಗೆ ಹೊರಟಿದ್ದ. ಇಬ್ಬರ ನಡುವೆ ಅಚಾನಕ್ಕಾಗಿ ನಾನಾ? ನೀನಾ? ಎಂಬ ಓವರ್ ಟೇಕ್ ಯುದ್ಧವೇ ಶುರುವಾಗಿದೆ. ಕೊನೆಗೆ ಎಲ್ಲವೂ ಕೈ ಮೀರಿದಾಗ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಜಿಗಿದಿದೆ. ಅದನ್ನೇ ಫಾಲೋ ಮಾಡುತ್ತಿದ್ದ ಬೈಕ್ ಸವಾರ ತನ್ನ ಬೈಕ್ ಸಮೇತ ಗದ್ದೆಗೆ ಹಾರಿದ್ದಾನೆ. ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಬೈಕ್ ಹಾಗೂ ಕಾರಿಗೆ ಡ್ಯಾಮೇಜ್ ಆಗಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದ್ರೆ ಕೇಸ್ ದಾಖಲಾಗಿಲ್ಲ!
PublicNext
15/12/2020 08:53 am