ಚಿತ್ರದುರ್ಗ : ಸರ್ಕಾರದಿಂದ ಬಡ ಕಾರ್ಮಿಕರಿಗೆ ವಿತರಿಸಿರುವ ಆಹಾರ ಕಿಟ್ ಗಳ, ಅಕ್ಕಿಯಲ್ಲಿ ಹುಳ ಹಾಗೂ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ ಎಂಬ ಆರೋಪ ಹೊಸದುರ್ಗ ತಾಲ್ಲೂಕಿನಲ್ಲಿ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕ್ಷೇತ್ರದ ಶಾಸಕರು ಕೋವಿಡ್ -19 ಹಿನ್ನೆಲೆಯಲ್ಲಿ ಬಡ ಕಾರ್ಮಿಕರಿಗೆ ಸರ್ಕಾರದಿಂದ ಬಂದಿರುವ ಆಹಾರ ಕಿಟ್ ವಿತರಣೆ ಮಾಡಿದ್ದರು. ಸರ್ಕಾರದಿಂದ ತಾಲ್ಲೂಕಿಗೆ ಸರ್ಕಾರದಿಂದ 10 ಸಾವಿರ ಕಿಟ್ ಕೊಡಲಾಗಿತ್ತು.
ತಾಲೂಕಿಗೆ ಆಹಾರ ಕಿಟ್ ಬಂದು ಎರಡು ತಿಂಗಳಾದರೂ ಸರಿಯಾಗಿ ಕಿಟ್ ವಿತರಣೆ ಮಾಡದ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದ ಹಿನ್ನಲೆಯಲ್ಲಿ ಅಕ್ಕಿಯಲ್ಲಿ ಹುಳ ಬಿದ್ದಿದ್ದು, ಬೇಳೆ, ಸಾಂಬಾರ್ ಪುಡಿ, ದನ್ಯಪುಡಿ, ಇತರೇ ಪದಾರ್ಥಗಳ ಅವಧಿ ಮುಗಿದಿದೆ. ಇಂತಹವುಗಳನ್ನು ವಿತರಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮತ್ತೊಂದು ಕಡೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಕೂಡ ಹುಳ ಬಿದ್ದಿರುವ ಹಾಗೂ ಅವಧಿ ಮುಗಿದು ಹೋದ ಆಹಾರ ಕಿಟ್ ಗಳನ್ನ ತಾಲೂಕಿನಾದ್ಯಂತ ಶಾಸಕ ಗೂಳಿಹಟ್ಟಿ ಡಿ ಶೇಖರ್ ಹಂಚಿದ್ದಾರೆಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಪಂಚಾಯಿತಿ ಮೂಲಕ ಕಿಟ್ ವಿತರಣೆ ಮಾಡಿಕೊಂಡು ಬರುತ್ತಿದ್ದು. ಇನ್ನು 20 ಪಂಚಾಯಿತಿಗಳಿಗೆ ವಿತರಿಸುವ ಬಾಕಿ ಇದ್ದು, ಇನ್ನೇಷ್ಟು ತಿಂಗಳು ಕಳೆಯಬೇಕು ಎಂದು ಕಾರ್ಮಿಕರು ಅಧಿಕಾರಿಗಳಿಗೆ ಪ್ರಶ್ನೆಸಿದ್ದಾರೆ. ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಒಂದೇ ದಿನದಲ್ಲಿ ವ್ಯವಸ್ಥಿತವಾಗಿ 9 ಸಾವಿರ ಕಾರ್ಮಿಕರಿಗೆ ಕಿಟ್ ವಿತರಿಸಿದ್ದಾರೆ. ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ ಸಾಮಾಜಿಕ ಕಾರ್ಯಕರ್ತ ಮೋಹನ್ ಗುಜ್ಜಾರ್.
ಒಟ್ಟಾರೆಯಾಗಿ ದೇವರು ಕೊಟ್ರು, ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತಿನಂತೆ ಕಾರ್ಮಿಕ ಇಲಾಖೆ ಕೊಟ್ರು, ಸ್ಥಳೀಯ ಕಾರ್ಮಿಕ ಅಧಿಕಾರಿಗಳು ಕೊಡಲಿಲ್ಲ ಎನ್ನುವಂತಾಗಿದೆ.
PublicNext
25/08/2021 11:32 am