ಗದಗ: ತಾಲೂಕಿನ ನಾಗಾವಿ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛ ಮಾಡಿಸಲಾಗಿದೆ. ಮಕ್ಕಳು ಸುರಕ್ಷತೆ ಕ್ರಮ ಇಲ್ಲದೇ ಟಾಯ್ಲೆಟ್ ಕ್ಲೀನ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಗದಗ ತಾಲೂಕಿನ ನಾಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೇಮಾ ಅವ್ರು ಮಕ್ಕಳನ್ನ ಬಳಸಿ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ ಎನ್ನಲಾಗಿದೆ. ವಾರಕ್ಕೆ ಒಂದು ಬಾರಿ ಶೌಚಾಲಯ ಕ್ಲೀನ್ ಮಾಡೋದಕ್ಕೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿದೆಯಂತೆ. ಹ್ಯಾಂಡ್ ಗ್ಲೌಸ್ ಸೇರಿದಂತೆ ಯಾವುದೇ ಸುರಕ್ಷತೆ ಕ್ರಮ ಕೈಗೊಳ್ಳದೇ ಮಕ್ಕಳನ್ನ ಶೌಚಾಲಯ ಸ್ವಚ್ಛಗೊಳಿಸೋದಕ್ಕೆ ಬಳಸಲಾಗಿದೆ..
ಟಾಯ್ಲೆಟ್ ಕ್ಲೀನಿಂಗ್ ಗೆ ವಿದ್ಯಾರ್ಥಿನಿಯರ ಬಳಕೆ.!
ವೀಡಿಯೋ ವೈರಲ್ ಆಗ್ತಿದ್ದಂತೆ ಮಕ್ಕಳು ಸ್ವ ಇಚ್ಛೆಯಿಂದ ಟಾಯ್ಲೆಟ್ ಕ್ಲೀನ್ ಮಾಡಿದ್ರು ಅಂತಾ ಹೇಳಿಕೆ ಪಡೆಯಲಾಗಿದ್ಯಂತೆ.. ಅಲ್ಲದೇ ಇದರ ವೀಡಿಯೋ ಮಾಡಿದ್ದ ಅಡುಗೆ ಸಹಾಯಕಿಗೆ ಕಿರುಕುಳ ನೀಡಲಾಗಿದೆ ಎಂಬ ಮಾಹಿತಿ ಇದೆ.
ಸುರೇಶ್ ಲಮಾಣಿ, ಪಬ್ಲಿಕ್ ನೆಕ್ಸ್ಟ ಗದಗ
PublicNext
22/07/2022 06:33 pm