ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮುಖ್ಯ ಶಿಕ್ಷಕಿಗೆ ಚಪ್ಪಲಿ ತೋರಿಸಿದ ಶಿಕ್ಷಕನಿಗೆ ಅಮಾನತು ಶಿಕ್ಷೆ!

ಮಧುಗಿರಿ:ಮದ್ಯಪಾನ ಮಾಡಿ ಮುಖ್ಯಶಿಕ್ಷಕಿಗೆ ಚಪ್ಪಲಿ ತೋರಿಸಿ ಅವರೊಂದಿಗೆ ಅಸಭ್ಯವವಾಗಿ ವರ್ತಿಸಿದ್ದಲ್ಲದೆ ವಿಧ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಹಾಗೂ ವಿವಿಧ ಆರೋಪಗಳಡಿ ತಾಲ್ಲೂಕಿನ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಫಣೀಂದ್ರನಾಥ್ ರವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ರೇವಣ್ಣಸಿದ್ದಪ್ಪ ವಿಚಾರಣೆ ಹಾಗೂ ಸೂಕ್ತ ಶಿಸ್ತು ಕ್ರಮ ಕಾಯ್ದಿರಿಸಿ ಶುಕ್ರವಾರದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಗೊಳಿಸಿ ಆದೇಶಿಸಿದ್ದಾರೆ.

ಈತನ ವಿರುದ್ಧ 4 ಪುಟಗಳಷ್ಟು ಆರೋಪಗಳಿದ್ದು ಅಮಾನತು ಗೊಂಡ ಶಿಕ್ಷಕ ಈ ಹಿಂದೆ ಗೌರಮ್ಮ ಎಂಬುವವರು ಮುಖ್ಯಶಿಕ್ಷಕರಾಗಿ ಪ್ರಭಾರ ವಹಿಸಿಕೊಳ್ಳುವಂತೆ ಬಿ.ಇ.ಒ ಆದೇಶಿಸಿದ್ದರು. ಆಗ ಮುಖ್ಯ ಶಿಕ್ಷಕರ ಪ್ರಭಾರ ಹೊಂದಿದ್ದ ಫಣೀಂದ್ರನಾಥ್ ತಮ್ಮ ಸ್ಥಾನವನ್ನು ಬಿಟ್ಟುಕೊಡದೆ ಬಿ.ಇ.ಒ ಆದೇಶವನ್ನು ದಿಕ್ಕರಿಸಿ ಮನಬಂದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನಿಂದಿಸಿದ್ದ, ಈತನ ವರ್ತನೆಯ ಬಗ್ಗೆ ಶಾಲೆಯ ಶಿಕ್ಷಕರು ನಮಗೆ ಭಯದ ವಾತಾವರಣ ವಿದ್ದು ರಕ್ಷಣೆ ನೀಡುವಂತೆ ಲಿಖಿತವಾಗಿ ದೂರು ನೀಡಿದ್ದರು. ಶಾಲೆಗೆ ಸರಿಯಾದ ಸಮಯಕ್ಕೆ ಬಾರದೆ ಹಾಜರಾತಿ ಪುಸ್ತಕವನ್ನು ಕಸಿದುಕೊಂಡು ಸಹಿ ಹಾಕುವ ಪರಿಪಾಠ ರೂಢಿಸಿಕೊಂಡಿದ್ದ.

ಮಕ್ಕಳಿಗೆ ಕಲಿಕೆ ಮಾಡಲು ಗೊಂದಿಹಳ್ಳಿ ಗ್ರಾಮಭೇಟಿ, ಮನೆಮನೆ ಎಂದು ಚಲನವಲನ ಪುಸ್ತಕದಲ್ಲಿ ನಮೂದಿಸಿ ನಾಪತ್ತೆಯಾಗಿದ್ದ. ವಿಜ್ಞಾನ ಶಿಕ್ಷಕನಾಗಿದ್ದ ಫಣೀಂದ್ರನಾಥ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲು ನಿರಾಕರಿಸುತ್ತಿದ್ದ,ಮುಖ್ಯ ಶಿಕ್ಷಕರಿಗೆ ಜಾತಿ ನಿಂದನೆ ಮಾಡಿ ಏಕ ವಚನದಲ್ಲಿ ಮಾತನಾಡಿ ಅನುಚಿತವಾಗಿ ವರ್ತಿಸುತ್ತಿದ್ದುದರ ಬಗ್ಗೆ ಬಿ.ಇ.ಒ ಗೆ ಇಡೀ ಶಾಲೆಯ ಶಿಕ್ಷಕರಲ್ಲದೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳು , ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರೂ ಸಹ ದೂರು ನೀಡಿದ್ದರು. ಸಾಂದರ್ಭಿಕ ರಜೆ ಎಂದು ಹಾಜರಾತಿ ಪುಸ್ತಕದಲ್ಲಿ ಬರೆದಿದ್ದರೂ ಕೂಡ ದೌರ್ಜನ್ಯವೆಸಗಿ ಸಹಿ ಮಾಡಿದ್ದಾರೆ.

ಪ್ರತಿದಿನ ತಡವಾಗಿ ಶಾಲೆಗೆ ಬರುವುದು. ಸಹಿಮಾಡಿ ಮನೆಗೆ ಹೋಗುವುದನ್ನೇ ಪ್ರತಿದಿನದ ಕಾಯಕ ಮಾಡಿಕೊಂಡಿದ್ದರು. ‌ಇದರಿಂದಾಗಿ ಶಾಲೆಯ ವಾತಾವರಣ ಶೈಕ್ಷಣಿಕ ವಾಗಿ ಹಾಳಾಗಿರುತ್ತದೆ. ಈತನ ವರ್ತನೆಯಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪರಿಸ್ಥಿತಿ ತಲುಪಿರುತ್ತದೆ ಎಂದು ಇಲಾಖಾಧಿಕಾರಿಗಳು ವರದಿ ಸಲ್ಲಿಸಿದ್ದರು.ಈ ಎಲ್ಲಾ ಆರೋಪಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ತ್ರಿಸದಸ್ಯ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದು ಮೇಲ್ಕಂಡ ಆರೋಪಗಳ ಆಧಾರದ ಮೇಲೆ ಅಮಾನತು ಗೊಳಿಸಲಾಗಿದೆ.

ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಫಣೀಂದ್ರನಾಥ್ ಶಿಕ್ಷಕ ದಂಪತಿಗಳಿಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನೇ ಬಂಡವಾಳ ಮಾಡಿಕೊಂಡು ಅವರಿಂದ ಸನ್ಮಾನವನ್ನು ಪಡೆದು ಶಿಕ್ಷಕ ವಲಯದಲ್ಲಿ ನಗೆಪಾಟಲಿಗೂ ಸಹ ಈಡಾಗಿದ್ದರು. ಇವರು ಕೌಟುಂಬಿಕ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ನಲ್ಲಿ ಸೆರೆಹಿಡಿದ ಪರಿಣಾಮ ಸಿಪಿಐ ರವರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದರು. ಇವುಗಳಲ್ಲದೆ ಪರಿಶಿಷ್ಟ ಪಂಗಡದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷನೆಂದು ಹೇಳಿಕೊಂಡು ನೂರಾರು ಶಿಕ್ಷಕರಿಗೆ ನೋವು ನೀಡಿದ್ದನ್ನು ಸಹ ಡಿಡಿಪಿಐ ಕಛೇರಿಯ ಆವರಣದಲ್ಲಿ ಸೇರಿದ್ದ ಶಿಕ್ಷಕ ವೃಂದದಿಂದ ಕೇಳಿಬಂತು.‌

ಒಟ್ಟಾರೆ ತಾಲೂಕಿನಾದ್ಯಂತ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

Edited By :
PublicNext

PublicNext

17/07/2022 08:40 am

Cinque Terre

53.12 K

Cinque Terre

5

ಸಂಬಂಧಿತ ಸುದ್ದಿ