ಬೆಂಗಳೂರು: ಆತ ಮಕ್ಕಳಿಗೆ ಬುದ್ದಿ ಹೇಳಿ ಉತ್ತಮ ಭವಿಷ್ಯ ರೂಪಿಸಬೇಕಾದಂತಹ ಶಿಕ್ಷಕ ಆದ್ರೆ ಈ ಶಿಕ್ಷಕ ಶಿಕ್ಷಕನಾಗಲು ಅಯೋಗ್ಯ ಎನ್ನಬಹುದು. ಹೌದು ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ಎಂಬಾತ ವಿದ್ಯಾರ್ಥಿಯ ತಾಯಿಯಿಂದ ಶಾಲೆಯಲ್ಲಿಯೇ ಮಸಾಜ್ ಮಾಡಿಸಿಕೊಂಡು ಸದ್ಯ ಸುದ್ದಿಯಾಗಿದ್ದಾನೆ.
ಸದ್ಯ ಮಾಸ್ತರ ಮಸಾಜ್ ಮಾಡಿಸಿಕೊಂಡ ಆರೋಪದ ಮೇಲೆ ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಮುಖ್ಯ ಶಿಕ್ಷಕ ಮಸಾಜ್ ಮಾಡಿಸಿಕೊಂಡ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಬುಧವಾರ ಸಂಜೆ ಅಮಾನತು ಆದೇಶವನ್ನು ಬಿಬಿಎಂಪಿ ಹೊರಡಿಸಿದೆ.
ಮಗುವನ್ನು ಶಾಲೆಗೆ ದಾಖಲಿಸಲು ಬಂದ ಮಹಿಳೆಯಲ್ಲಿ ಆಕೆಯ ವೃತ್ತಿಯ ಬಗ್ಗೆ ಶಿಕ್ಷಕ ಲೋಕೆಶಪ್ಪ ವಿಚಾರಿಸಿದ್ದರು. ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಹೇಳುತ್ತಿದ್ದಂತೆ ಮಹಿಳೆಯನ್ನು ತರಗತಿ ಕೊಠಡಿಯೊಂದಕ್ಕೆ ಕರೆದೊಯ್ದು ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ವಿಚಾರಿಸಿದಾಗ ಲೋಕೇಶಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ಶಂಕರ್ ಬಾಬು ರೆಡ್ಡಿ ಹೇಳಿದ್ದಾರೆ.
PublicNext
24/09/2021 12:50 pm