ಹೈದರಾಬಾದ್: ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ಸದ್ದು ಮಾಡಿದೆ. ಈಚೆಗಷ್ಟೇ ತೆಲುಗಿನ ಪ್ರಖ್ಯಾತ ನಟ, ನಟಿ, ನಿರ್ದೇಶಕರಿಗೆ ಎನ್‌ಸಿಬಿ ನೋಟಿಸ್ ನೀಡಿತ್ತು. ಈಗ ಮತ್ತೊಂದು ವಿಚಾರಕ್ಕೆ ಟಾಲಿವುಡ್ ಸುದ್ದಿಯಾಗಿದೆ.
ರೇವ್ ಪಾರ್ಟಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿಯ ಮುದ್ದಿನ ಮಗಳು ನಿಹಾರಿಕಾ ಕೊನಿಡೆಲಾ ಅವರನ್ನು ವಶಕ್ಕೆ ಪಡೆಯಲಾಗಿದೆ. ನಿಹಾರಿಕಾ ಜೊತೆಗೆ ಇನ್ನಷ್ಟು ಉದ್ಯಮಿಗಳ ಮಕ್ಕಳು, ಸೆಲೆಬ್ರಿಟಿಗಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿಯನ್ನು ಈ ದಾಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್ ಠಾಣೆಯ ಟಾಸ್ಕ್ ಫೋರ್ಸ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ ಬಳಿಕ ನಿಹಾರಿಕಾ ಸೇರಿದಂತೆ ಎಲ್ಲರಿಗೂ ನೋಟಿಸ್ ನೀಡಿ ಮನೆಗೆ ಕಳುಹಿಸಿದ್ದಾರೆ. ಪೊಲೀಸ್ ಠಾಣೆಯಿಂದ ನಿಹಾರಿಕಾ ಹೊರಬರುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
03/04/2022 06:00 pm