ತಿರುವನಂತಪುರ: ಬಹುಭಾಷಾ ತಾರೆ ಪಾರ್ವತಿ ತಿರುವೋತುಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ನಟಿಯನ್ನು ಹಿಂಬಾಲಿಸಿ, ಆಕೆಯ ಮನೆಗೆ ಬರುವುದೂ ಅಲ್ಲದೇ, ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದ ಕೊಲ್ಲಂ ಮೂಲದ ಅಫ್ಸಲ್ ನನ್ನು (34) ಪೊಲೀಸರು ಬಂಧಿಸಿದ್ದಾರೆ.
ಆಹಾರ ಪೊಟ್ಟಣಗಳನ್ನು ಹೊತ್ತು ಮನೆಗೆ ಭೇಟಿ ನೀಡುವ ಇತನಿಗೆ ನಟಿ ನಮಗೆ ಈ ತಿಂಡಿ ಪೊಟ್ಟಣವೆಲ್ಲಾ ಬೇಡ ಎಂದು ಹಲವು ಬಾರಿ ಹೇಳಿದರು ಬಿಡದ ಆತ ಪದೇ ಪದೇ ನಟಿ ಮನೆಗೆ ಭೇಟಿ ನೀಡುತ್ತಿದ್ದ. ಅಲ್ಲಿರುವ ಭದ್ರತಾ ಸಿಬ್ಬಂದಿ ಜತೆ ಕ್ಯಾತೆ ತೆಗೆದು ಒಳಗೆ ನುಗ್ಗುತ್ತಿದ್ದ. ಈತನ ವಿರುದ್ಧ ಈ ಹಿಂದೆಯೇ ನಟಿ ದೂರು ದಾಖಲಿಸಿದ್ದರು.
ಮಲಯಾಳಿ ನಟಿಯಾಗಿರುವ ಪಾರ್ವತಿ, ಕನ್ನಡದಲ್ಲಿಯೂ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜತೆ ‘ಮಿಲನ’, 'ಪೃಥ್ವಿ', ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಮಳೆ ಬರಲಿ ಮಂಜೂ ಇರಲಿ', 'ಅಂದರ್ ಬಾಹರ್' ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ.
PublicNext
22/12/2021 05:48 pm