ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾರುಖ್ VS ಸಮೀರ್​: 10 ವರ್ಷದ ಹಿಂದೆಯೇ ನಟನನ್ನ ತಡೆಹಿಡಿದಿದ್ರು ವಾಂಖೇಡೆ.!

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್ ಖಾನ್ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ಒಂದರ ಹಿಂದೆ ಮತ್ತೊಂದು ಆರೋಪ ಕೇಳಿ ಬರುತ್ತಿವೆ. ಇದೀಗ ಅವರ ಬಗ್ಗೆ ಹತ್ತು ವರ್ಷದ ಹಿಂದಿನ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ.

ಹೌದು. 2011ರಲ್ಲಿ ಸಮೀರ್ ವಾಂಖೇಡೆ ಅವರು ಕಸ್ಟಮ್ಸ್​ ಸಹಾಯಕ ಕಮಿಷನರ್ ಆಗಿದ್ದರು. ಆಗ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್​ ಖಾನ್​​ರನ್ನು ತಡೆಹಿಡಿದಿದ್ದರು. ಸುಮಾರು 20 ಬ್ಯಾಗ್​ಗಳನ್ನು ಹೊತ್ತು ತಂದಿದ್ದ ಶಾರುಖ್​ರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಗಿತ್ತು. ತದನಂತರ 1.5 ಲಕ್ಷ ರೂಪಾಯಿ ಕಸ್ಟಮ್ಸ್​ ಡ್ಯೂಟಿ ಕಟ್ಟಲು ಹೇಳಿ ಅವರನ್ನು ಹೋಗಲು ಬಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

Edited By : Vijay Kumar
PublicNext

PublicNext

27/10/2021 10:32 pm

Cinque Terre

55.68 K

Cinque Terre

4

ಸಂಬಂಧಿತ ಸುದ್ದಿ