ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್ ಕುಂದ್ರಾಗೆ ಮತ್ತೊಂದು ಆಘಾತ ಎದುರಾಗಿದೆ. ಪೊಲೀಸರು ಅವರನ್ನು ಬಂಧಿಸಿದ್ದೇ ತಡ ಹಲವು ನಟಿಯರು ರಾಜ್ ಕುಂದ್ರಾ ಮೇಲೆ ಆರೋಪಗಳ ಸುರಿಮಳೆ ಸುರಿದುತ್ತಿದ್ದಾರೆ. ಆತ ನನ್ನದೂ ಅಶ್ಲೀಲ ವಿಡಿಯೋ ಮಾಡಿಸಿದ್ದ ಎನ್ನುತ್ತಿದ್ದಾರೆ.
ಇದೀಗ, ಮತ್ತೊಬ್ಬ ನಟಿ ಕಮ್ ಮಾಡೆಲ್ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ತೆಲುಗು ಬುಲೆಟಿನ್, ಜೀ ತೆಲುಗು, ಟಿ-ನ್ಯೂಸ್ ತೆಲುಗು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ, ''ಅನುಮತಿ ಇಲ್ಲದೇ ಇಂಟರ್‌ನೆಟ್‌ನಲ್ಲಿ ನಗ್ನ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರಂತೆ.
ಈ ದೂರು ಕೊಟ್ಟಿರುವ ಮಾಡೆಲ್ ಕಮ್ ನಟಿ ಯಾರೆಂದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ಮುಂಬೈನ ಮಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.
PublicNext
09/08/2021 09:54 am