ಕೋಲ್ಕತ್ತಾ: ಹಿಂದೂ ನಂಬಿಕೆಯ ಪ್ರತೀಕವಾಗಿರುವ ಶಿವಲಿಂಗವನ್ನು ಅವಮಾನಿಸಿರುವ ಬಂಗಾಳಿ ನಟಿ ಸಾಯೋನಿ ಘೋಷ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
2015ರಲ್ಲಿ ಶಿವಲಿಂಗವನ್ನು ಅವಹೇಳನ ಮಾಡಿದ್ದ ಟ್ವೀಟ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ನಟಿ ಸಯೋನಿ ವಿರುದ್ಧ ಅಸಂಖ್ಯಾತ ಭಕ್ತರು ಕೆಂಡಾಮಂಡಲರಾಗಿದ್ದಾರೆ. ಅಷ್ಟೇ ಅಲ್ಲದೆ ನಟಿಯ ವಿರುದ್ಧ ದೂರು ದಾಖಲಾಗಿದೆ.
ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ನಟಿ ಸಾಯೋನಿ ಘೋಷ್ ಕ್ಷಮೆಯಾಚಿಸಿದ್ದಾರೆ. ಇದಕ್ಕೂ ಮುನ್ನ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಉಡಾಫೆ ಉತ್ತರ ನೀಡಿ ಸಮರ್ಥನೆಗೆ ಮುಂದಾಗಿದ್ದರು.
PublicNext
17/01/2021 08:59 pm