ಶ್ರೀನಗರ : ನಗರದ ಹವಾಲ ಎಂಬಲ್ಲಿ ಗುರುವಾರ 40 ವರ್ಷದ ನ್ಯಾಯವಾದಿಯೊಬ್ಬರನ್ನು ಅವರ ನಿವಾಸದಲ್ಲಿ ಶಂಕಿತ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ವಕೀಲೀ ವೃತ್ತಿ ಮಾತ್ರವಲ್ಲದೆ ಟಿ.ವಿಗಳಲ್ಲಿನ ಡಿಬೇಟ್ ಗಳು ಭಾಗಿಯಾಗುತ್ತಿದ್ದ ಬಾಬರ್ ಖಾದ್ರಿ. ವಿರೋಧಿಗಳನ್ನು ಹೊಂದಿದ್ದರು ಎನ್ನಲಾಗಿದೆ.
ಮೂರು ದಿನಗಳ ಹಿಂದಷ್ಟೇ ಸ್ಕ್ರೀನ್ ಶಾಟ್ ಒಂದನ್ನು ಟ್ವೀಟ್ ಮಾಡಿದ್ದ ಅವರು. ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಮ್ಮು ಪೊಲೀಸರಿಗೆ ಒತ್ತಾಯಿಸಿದ್ದರು.
ಇದರ ಬೆನ್ನಲ್ಲೇ ಅನಾಮಿಕನೊಬ್ಬ ಬಾಬರ್ ಖಾದ್ರಿ ಅವರನ್ನು ಗುಂಡಿಟ್ಟು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆಬಿಸಿದ್ದಾರೆ.
PublicNext
25/09/2020 07:20 am